ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಿಬಿಯಾ ವಿರುದ್ಧ ಮತ್ತಷ್ಟು ದಿಗ್ಬಂದನ: ಯುರೋಪ್ (Libiya | Gadafi | Europe | Oil)
ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಢಾಫಿ ಅಡಳಿತದಿಂದ ಕೆಳಗಿಳಿಯಲು ನಿರಾಕರಿಸಿದ್ದರಿಂದ, ಮತ್ತಷ್ಟು ದಿಗ್ಬಂಧನ ಹೇರಲು ಐರೋಪ್ಯ ಒಕ್ಕೂಟ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಪ್ರಮುಖ ಆದಾಯವಾದ ತೈಲ ವರಮಾನವನ್ನು ತಡೆಹಿಡಿಯಲು ಮುಂದಾಗಿದೆ. ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಯುರೋಪ್ ಬ್ಯಾಂಕ್‌ಗಳಲ್ಲಿರುವ ಲಿಬಿಯಾದ 27 ತೈಲ ಕಂಪೆನಿಗಳ ಖಾತೆಗಳನ್ನು ಮುಟ್ಟುಗೋಲು ಹಾಕಲು ನಿರ್ಧರಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಸಂಸ್ಥೆ ಬಯಸಿದಲ್ಲಿ ಲಿಬಿಯಾ ಜನತೆಗೆ ಮಾನವೀಯ ನೆಲೆಯ ಹಿನ್ನೆಲೆಯಲ್ಲಿ ಸೇನಾ ನೆರವು ಒದಗಿಸಲು ಸಿದ್ಧ ಎಂದು ಐರೋಪ್ಯ ಒಕ್ಕೂಟ ಘೋಷಿಸಿದೆ.

ಲಿಬಿಯಾ ರಾಷ್ಟ್ರಾಧ್ಯಕ್ಷ ಗಢಾಫಿ, ತೈಲ ಸಂಪತ್ತನ್ನು ವಿರೋಧಿಗಳ ಹುಟ್ಟಡಗಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಯುರೋಪ್ ರಾಷ್ಟ್ರಗಳು ಆರೋಪಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲಿಬಿಯಾ, ಗಢಾಫಿ, ಯುರೋಪ್, ತೈಲ