ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೂ ಆಯ್ತು; ಈಗ ಜರ್ಮನಿ ಅಧ್ಯಕ್ಷರ ಮೇಲೆ ಮೊಟ್ಟೆ ಎಸೆತ! (German President | Egg Attack | Christian Wulff | Shoe Attack)
ಸಾಮಾನ್ಯ ಜನರು ಸರಕಾರ ವಿರುದ್ಧದ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಹಲವು ರೀತಿಯ ಪ್ರತಿಭಟನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಅಮೆರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಶೂ ಎಸೆದಿರುವುದು ಹಳೆಯ ಕಥೆ.

ಈಗ ಲಭಿಸಿರುವ ವರದಿಯಂತೆ ವ್ಯಕ್ತಿಯೊರ್ವ ಜರ್ಮನಿ ಅಧ್ಯಕ್ಷ ಕ್ರಿಸ್ಟಿಯನ್ ವೂಲ್ಫ್ ಮೈಮೇಲೆ ಮೊಟ್ಟೆ ಎಸೆದಿರುವ ಘಟನೆ ವಿಸ್ಬಾಡೆನ್‌ನಲ್ಲಿ ಗುರುವಾರ ನಡೆದಿದೆ.

ಜರ್ಮನಿ ಅಧ್ಯಕ್ಷರು ಫ್ರಾಂಕ್‌ಫುರ್ಟ್ ಸಮೀಪ ವಿಸ್ಬಾಡೆನ್‌ ನಗರಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ಘಟನೆ ನಡೆದಿತ್ತು. ಪ್ರತಿಭಟನಾಕಾರ ಮೊಟ್ಟೆ ದಾಳಿ ನಡೆಸಿದ್ದು, ಆದರೆ ಇದರ ಹಿಂದಿನ ಕಾರಣ ತಿಳಿದು ಬಂದಿಲ್ಲ.

ಅಂದ ಹಾಗೆ ಜರ್ಮನಿ ಅಧ್ಯಕ್ಷರ ಸ್ಥಾನ ಪಡೆದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿದ್ದರು. ಕ್ರಿಸ್ಟಿಯನ್ ಜತೆಯಿದ್ದ ಸ್ಟೇಟ್ ಆಫ್ ಹೆಸ್ಸೆದ ಗರ್ವನರ್ ಮೊಲ್ಕರ್ ಬಫಿಯರ್ ಅವರಿಗೂ ಮೊಟ್ಟೆ ದಾಳಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ 48 ವರ್ಷದ ವ್ಯಕ್ತಿಯೊರ್ವರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಘಟನೆಯನ್ನು ಮಾಮೂಲಿಯಾಗಿ ಪರಿಗಣಿಸಿರುವ ಜರ್ಮನ್ ಅಧ್ಯಕ್ಷರು ಪ್ರಕರಣವನ್ನು ಇಲ್ಲಿಗೆ ಇತ್ಯರ್ಥಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಇವನ್ನೂ ಓದಿ