ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಾಫಿ ಪದತ್ಯಾಗಕ್ಕೆ ಒತ್ತಡ ಹೆಚ್ಚಾಗುತ್ತಿದೆ: ಒಬಾಮಾ (Barak Obama | Muammar Gaddafi | NATO | Libya)
ಗಲಭೆಗ್ರಸ್ತ್ರ ಲಿಬಿಯಾದಲ್ಲಿ ಮುಅಮ್ಮರ್ ಗಡಾಫಿ ಅಧಿಕಾರದಲ್ಲಿರುವ ವರೆಗೂ ನ್ಯಾಟೊ ಪಡೆಗಳು ದಾಳಿಯನ್ನು ಮುಂದುವರಿಸಲಿದೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ.

ಗಡಾಫಿ ಒಳಗೊಂಡ ಲಿಬಿಯಾದ ಭವಿಷ್ಯ ಊಹಿಸಲೂ ಅಸಾಧ್ಯ ಎಂದಿರುವ ಒಬಾಮಾ, ಲಿಬಿಯಾ ನಾಗರಿಕರ ಒಳಿತಿಗಾಗಿ ಗಢಾಫಿ ಪದತ್ಯಾಗ ಆಗಲೇಬೇಕು ಎಂದಿದ್ದಾರೆ.

ಗಡಾಫಿ ಅಧಿಕಾರದಲ್ಲಿರುವ ವರೆಗೆ ನ್ಯಾಟೊ ಪಡೆ ಕಾರ್ಯಾಚರಣೆ ಮುಂದುವರಿಸಲಿದೆ. ಇದರಿಂದ ನಾಗರಿಕರ ಜೀವಕ್ಕೆ ರಕ್ಷಣೆ ಸಿಗಲಿದೆ ಎಂದವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಲಿಬಿಯಾ ಪ್ರಕರಣದಲ್ಲಿ ಅಮೆರಿಕಾದ ನೇರ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದಿರುವ ಒಬಾಮಾ, ಗಡಾಫಿ ಪದತ್ಯಾಗಕ್ಕೆ ಒತ್ತಡ ಹೆಚ್ಚುತ್ತಿದೆ ಎಂದಿದ್ದಾರೆ.
ಇವನ್ನೂ ಓದಿ