ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ಅಮೆರಿಕಾ ಡ್ರೋನ್ ವಿಮಾನ ತಂತ್ರಜ್ಞಾನಗಳನ್ನು ತಮಗೆ ಒದಗಿಸುವಂತೆ ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಒತ್ತಾಯ ಮಾಡಿದ್ದಾರೆ.
ಬುಡಕಟ್ಟು ಪ್ರದೇಶದಲ್ಲಿ ಅಮೆರಿಕಾ ನಡೆಸುತ್ತಿರುವ ಡ್ರೋನ್ ದಾಳಿಯನ್ನು ಕೂಡಲೇ ನಿಲ್ಲಿಸಬೇಕು. ಉಗ್ರರ ದಮನಕ್ಕಾಗಿ ಡ್ರೋನ್ ತಂತ್ರಜ್ಞಾನವನ್ನು ನಮಗೆ ಒದಸಿದ್ದಲ್ಲಿ ಸಂಪೂರ್ಣ ಕಾರ್ಯಚರಣೆ ಸುಲಭವಾಗುತ್ತದೆ ಎಂದು ಹೇಳಿದೆ.
ಭಯೋತ್ಪಾದಕರ ವಿರುದ್ಧ ಹೋರಾಟಕ್ಕಾಗಿ ಬೇಹುಗಾರಿಕಾ ಬಲವರ್ಧನೆಗೆ ಪಾಕ್ ಬಯಸುತ್ತಿದೆ. ಇದರಂತೆ ಡ್ರೋನ್ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುವಂತೆ ಸೋಮವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಅಮೆರಿಕಾ ಕಾಂಗ್ರೆಸ್‌ನ ಸಭಾಧ್ಯಕ್ಷ ಜಾನ್ ಬೋಯ್ನರ್ ಅವರನ್ನು ಒತ್ತಾಯಿಸಿದೆ.
ಇದೇ ಸಂದರ್ಭದಲ್ಲಿ ಬುಡಕಟ್ಟು ಪ್ರದೇಶದಲ್ಲಿ ಉಗ್ರರ ದಮನದಲ್ಲಿ ಪಾಕ್ ಕೂಡಾ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಹೀಗಾಗಿ ಅಮೆರಿಕಾ ನೆರವನ್ನು ನೀಡಬೇಕು ಎಂದಿದೆ.