ಪಾಕಿಸ್ತಾನದ ದಕ್ಷಿಣ ಕರಾಚಿಯಲ್ಲಿ ನೆಲೆ ನಿಂತಿರುವ ಜೂಜಾಟ ಕೇಂದ್ರವೊಂದರಲ್ಲಿ ಶುಕ್ರವಾರ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 19 ಮಂದಿ ಸಾವಿಗೀಡಾಗಿದ್ದಾರೆಂದು ವರದಿಗಳು ತಿಳಿಸಿವೆ.
ಘಟನೆಯಲ್ಲಿ 45ಕ್ಕೊ ಹೆಚ್ಚು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇದು ನಗರದ ಅತಿ ದೊಡ್ಡ ಜೂಜಾಟ ಕೇಂದ್ರವಾಗಿದ್ದು, ಕಾನೂನುಬಾಹಿರವಾಗಿ ದಂದೆ ನಡೆಯುತ್ತಿತ್ತು ಎಂದು ವರದಿಗಳು ಹೇಳಿವೆ.
ಪ್ರಕರಣದ ಕುರಿತಂತೆ ಪೂಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಪ್ರಾಥಮಿಕ ತನಿಖಾ ವರದಿಯಂತೆ ಜೂಜಾಟ ಕೇಂದ್ರದಲ್ಲಿರುವ ಮೇಜಿನ ಕೆಳಗಡೆ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.