ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಲ್ಲಿ ಡ್ರೋನ್ ದಾಳಿಗೆ 25 ಮಂದಿ ಬಲಿ (Drone attack | America | Pakistan | Ashfaq Parvez Kayani)
ಬುಡಕಟ್ಟು ಪ್ರದೇಶದಲ್ಲಿ ಡ್ರೋನ್ ದಾಳಿ ನಿಲುಗಡೆಗೊಳಿಸುವಂತೆ ಪಾಕಿಸ್ತಾನ ಸೇನಾಮುಖ್ಯಸ್ಥ ಜನರಲ್ ಅಸ್ಫಖ್ ಪರ್ವೇಜ್ ಕಯಾನಿ ಮನವಿಯನ್ನು ಲೆಕ್ಕಿಸದ ಅಮೆರಿಕಾ ಡ್ರೋನ್ ಪಡೆ ಕೆಲವೇ ದಿನಗಳೊಳಗೆ ಉತ್ತರ ವಾಜಿರಿಸ್ತಾನದಲ್ಲಿ ನಡೆಸಿರುವ 12 ಪ್ರತ್ಯೇಕ ಕ್ಷಿಪಣಿ ದಾಳಿಗಳಲ್ಲಿ ನಾಗರಿಕರು ಸೇರಿದಂತೆ ಒಟ್ಟು 25 ಮಂದಿ ಸಾವಿಗೀಡಾದ ಘಟನೆ ವರದಿಯಾಗಿದೆ.

ಮೂಲಗಳ ಪ್ರಕಾರ ಪಾಕಿಸ್ತಾನ ಸರಕಾರದೊಂದಿಗೆ ಶಾಂತಿ ಪ್ರಕ್ರಿಯೆಗಾಗಿ ತಾಲಿಬಾನ್ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಫೀಜ್ ಗುಲ್ ಬಹಾದ್ದುರ್ ಕೂಡಾ ದಾಳಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಸಾವಿಗೀಡಾದವರಲ್ಲಿ ಮೂವರು ಮಹಿಳೆಯರು ಹಾಗೂ ಐದು ಮುಗ್ಧ ಮಕ್ಕಳು ಕೂಡಾ ಸೇರಿಕೊಂಡಿದ್ದಾರೆ ಎಂದು ಜಿಯೋ ವಾರ್ತಾ ಚಾನೆಲ್ ವರದಿ ಮಾಡಿವೆ.
ಇವನ್ನೂ ಓದಿ