ಇಂಡೋನೇಷ್ಯಾದ ಸುಲವೆಸಿ ದ್ವೀಪ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕಾ ಭೂಗರ್ಭಶಾಸ್ತ್ರ ಇಲಾಖೆಯು ವರದಿ ಮಾಡಿವೆ.
ಕೆಂದಾರಿ ನಗರದಿಂದ 75 ಕೀ.ಮೀ ದಕ್ಷಿಣ ಪೂರ್ವ ಪ್ರದೇಶದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಒಂಬತ್ತು ಕಿ.ಮೀ. ಆಳದ ವರೆಗೂ ಕಂಪನದ ತೀವ್ರತೆಯು ಕಂಡುಬಂದಿತ್ತು ಎಂದು ಯುಎಸ್‌ಜಿಎಸ್ ತಿಳಿಸಿದೆ.
ಫೆಸಿಫಿಕ್ 'ರಿಂಗ್ ಆಫ್ ಫೈರ್' ಪ್ರದೇಶದಲ್ಲಿ ಭೂಕಂಪವು ಹೆಚ್ಚಾಗಿ ಸಂಭವಿಸುತ್ತಿದೆ. ಹೀಗಾಗಿ ಇಂಡೋನೇಷ್ಯಾದಲ್ಲಿ ಭೂಕಂಪವು ಸರ್ವೇ ಸಾಧಾರಣವಾಗಿದ್ದು, ಹತ್ತಿರದ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.