ಜೈಲಿನೊಳಗೆ ಸುರಂಗ ಮಾರ್ಗ ತೋಡುವ ಮೂಲಕ 500ರಷ್ಟು ತಾಲಿಬಾನ್ ಉಗ್ರಗಾಮಿಗಳು ಪರಾರಿಯಾದ ಆಘಾತಕಾರಿ ಘಟನೆ ದಕ್ಷಿಣ ಅಫಘಾನಿಸ್ತಾನ ಕಂಧಹಾರ್ ಕಾರಾಗೃಹದಲ್ಲಿ ನಡೆದಿದೆ.
ಈ ಬೃಹತ್ ಎಸ್ಕೇಪ್ ಕಾರ್ಯಾಚರಣೆಯ ಹಿಂದೆ ತಮ್ಮ ಸಂಘಟನೆಯ ಕೈವಾಡವಿದೆ ಎಂದು ತಾಲಿಬಾನ್ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಖಚಿತಪಡಿಸಿದೆ.
ಸೆರೆಮನೆಯೂಳಗಿನಿಂದ 360 ಮೀಟರ್ ದೂರದ ತನಕ ಸುರಂಗ ಮಾರ್ಗ ತೋಡುವ ಮೂಲಕ 476 ರಾಜಕೀಯ ಕೈದಿಗಳು ಪರಾರಿಯಾಗಿದ್ದಾರೆ ಎಂದು ಕಾರಾಗೃಹದ ಮಹಾ ನಿರ್ದೇಶಕ ಗುಲಾಂ ಡಸ್ಟಾಜೀರ್ ಮಯಾರ್ ತಿಳಿಸಿದ್ದಾರೆ.
ಪರಾರಿಯಾದವರಲ್ಲಿ 106 ತಾಲಿಬಾನ್ ಕಮಾಂಡರ್‌ಗಳು ಕೂಡಾ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.