ಒಂದು ವೇಳೆ ಜಗತ್ತಿನ ಅತಿ ದೊಡ್ಡ ವ್ಯಾಪಾರ ಸಂಸ್ಥೆ 'ವಲ್ಡ್ ಟ್ರೆಂಡ್ ಸೆಂಟರ್' ಹೊಡೆದುರುಳಿಸಿದ್ದ ತಮ್ಮ ನಾಯಕ ಒಸಾಮಾ ಬಿನ್ ಲಾಡೆನ್‌ರನ್ನು ಹತ್ಯೆಗೈದಲ್ಲಿ ಅಥವಾ ಬಂಧಿಸಿದ್ದೇ ಆದಲ್ಲಿ ಅಣು ಬಾಂಬ್ ದಾಳಿ ನಡೆಸುವುದಾಗಿ ಅಲ್-ಖೈದಾ ಭಯೋತ್ಪಾದಕ ಸಂಘಟನೆ ಎಚ್ಚರಿಸಿದೆ.
ಜಗತ್ತಿನ ರಾಜತಾಂತ್ರಿಕತೆಯನ್ನು ಬಯಲು ಮಾಡುತ್ತಿರುವ ವೀಕೀಲೀಕ್ಸ್‌ನಲ್ಲಿ ಇದು ಬಹಿರಂಗವಾಗಿದೆ. ಜಗತ್ತಿನ ಮೊಸ್ಟ್ ವಾಂಟೆಡ್ ಕ್ರಮಿನಲ್ ಎನಿಸಿಕೊಂಡಿರುವ ಬಿನ್ ಲಾಡೆನ್ ಅವರನ್ನು ಬಂಧಿಸಿದ್ದಲ್ಲಿ ಅಥವಾ ಹತ್ಯೆ ಮಾಡಿದ್ದಲ್ಲಿ ಪಶ್ಚಿಮಾತ್ಯ ರಾಷ್ಟ್ರಗಳು ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಲ್-ಖೈದಾ ಕಮಾಂಡರ್ ಎಚ್ಚರಿಸಿದ್ದಾರೆ.
ಯುರೋಪ್‌ನಲ್ಲಿ ಅಣು ಬಾಂಬನ್ನು ಅಡಗಿಸಡಲಾಗಿದ್ದು, ಒಂದು ವೇಳೆ ಲಾಡೆನ್ ಹತ್ಯೆ ನಡೆದ್ದಲ್ಲಿ ದಾಳಿ ನಡೆಸಲು ಯೋಜನೆಯರಿಸಿಕೊಳ್ಳಲಾಗಿದೆ ಎಂದು ಕ್ಯೂಬಾದಲ್ಲಿ ಜೈಲುವಾಸ ಅನುಭವಿಸುತ್ತಿರುವ 780 ಕೈದಿಗಳ ರಹಸ್ಯ ವರದಿಯಲ್ಲಿ ಬಯಲಾಗಿದೆ. ಯುರೋಪಿಯನ್ ಹಾಗೂ ಅಮೆರಿಕಾದ ಆಯ್ದ ಪತ್ರಿಕೆಗಳಿಗೆ ಮಾತ್ರ ಇದರ ಪ್ರತಿಯನ್ನು ನೀಡಲಾಗಿದೆ.