ಅಲ್-ಖೈದಾ ಹಾಗು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳಷ್ಟೇ ಅಪಾಯಕಾರಿ ಎನಿಸಿಕೊಂಡಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ಕೂಡಾ ಭಯೋತ್ಪಾದಕ ಸಂಘಟನೆ ಆಗಿದೆ ಎಂದು ಅಮೆರಿಕಾ ಹೇಳಿದೆ.
'ದಿ ಗಾರ್ಡಿಯನ್' ವರದಿ ಮಾಡಿರುವ ಅತ್ಯಂತ ಗೌಪ್ಯ ವಿವರಗಳಲ್ಲಿ ಇದು ಬಹಿರಂಗವಾಗಿದ್ದು, ಅಮೆರಿಕಾ ತಯಾರಿಸಿರುವ ವಿಶ್ವದ ಪ್ರಮುಖ 36 ಭಯೋತ್ಪಾದಕ ಸಂಘಟನೆಯಲ್ಲಿ ಐಎಸ್‌ಐ ಅನ್ನು ಸೇರಿಸಿದೆ.
ಐಎಸ್‌ಐ, ಅಲ್-ಖೈದಾ ಅಲ್ಲದೆ ಈ ಟೆರರಿಸ್ಟ್ ಗ್ರೂಪ್‌ನಲ್ಲಿ ಈಜಿಪ್ಟ್ ಇಸ್ಲಾಮಿಕ್ ಜಿಹಾದಿ ಸಂಘಟನೆ, ಇರಾನ್ ಗುಪ್ತಚರ ಸಂಸ್ಥೆ ಕೂಡಾ ಸೇರಿಕೊಂಡಿದೆ.
ಅಮೆರಿಕಾ ಭಯೋತ್ಪಾದಕರ ಪಟ್ಟಿಯಲ್ಲಿ ಐಎಸ್ಐ ಕಾಣಿಸಿಕೊಂಡಿರುವುದರಿಂದ ಉಭಯ ದೇಶಗಳ ಬಾಂಧವ್ಯ ಮತ್ತಷ್ಟು ಹದೆಗೆಡುವ ಸಾಧ್ಯತೆಯಿದೆ.