ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಅಮೆರಿಕಾ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿರುವ ಪಾಕಿಸ್ತಾನ ಮೂಲದ ಮೆಜರ್ ಇಕ್ಬಾಲ್, ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್‌ನ (ಐಎಸ್‌ಐ) ಮಾಜಿ ಅಧಿಕಾರಿಯಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ವರದಿ ಮಾಡಿದೆ.
ಶಿಕಾಗೊ ನ್ಯಾಯಾಲಯದಲ್ಲಿ ಇಕ್ಬಾಲ್ ಕೈವಾಡ ಕುರಿತಂತೆ ವಿಚಾರಣೆ ನಡೆಯುತ್ತಿದೆ. ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಅವರಿಗೆ ಹಣಕಾಸಿನ ನೆರವನ್ನು ಈತ ನೀಡಿದ್ದ ಎಂದು ವರದಿಯಾಗಿದೆ. ಹೆಡ್ಲಿ ಕೂಡಾ ಪಾಕಿಸ್ತಾನ ಮೂಲದ ಪ್ರಜೆಯಾಗಿದ್ದು, ಈಗಾಗಲೇ ತಪ್ಪೊಪ್ಪಿಕೊಂಡಿದ್ದಾನೆ.
ಮೆಜರ್ ಇಕ್ಬಾಲ್ ವಿರುದ್ಧ ಸಲ್ಲಿಸಲಾಗಿರುವ ಆರೋಪ ಪತ್ರದಲ್ಲಿ ಆತನನ್ನು ಪಾಕಿಸ್ತಾನ ಪ್ರಜೆ ಎಂದು ಗುರುತಿಸಲಾಗಿದ್ದು, ಐಎಸ್ಎಸ್ ಸಂಸ್ಥೆಯಲ್ಲಿ ಕರ್ತವ್ಯದಲ್ಲಿದ್ದರು ಎಂದು ಹೇಳಲಾಗಿದೆ.