ಜಗತ್ತಿನ ದೊಡ್ಡಣ್ಣ ಅಮೆರಿಕಾದಿಂದಲೇ ಭಯೋತ್ಪಾದನೆ ಸಂಘಟನೆ ಎಂದು ಗುರಿತಿಸಲ್ಪಟ್ಟಿರುವ ಹಿನ್ನಲೆಯಲ್ಲಿ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಕ್ಕೆ ನಿಂತಿರುವ ಪಾಕಿಸ್ತಾನ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ, ಗುಪ್ತಚರ ಸಂಘಟನೆ ಏನೇ ಮಾಡಿದ್ರು ನಮ್ಮ ಬೆಂಬಲವಿದೆ ಎಂದಿದ್ದಾರೆ.
ನಮ್ಮ ಗುಪ್ತಚರ ಇಲಾಖೆಯ ಬಗ್ಗೆ ಮಾಧ್ಯಮಗಳಲ್ಲಿ ತಪ್ಪಾದ ಮಾಹಿತಿ ಪ್ರಚಾರವಾಗಿದೆ. ಅವರಿಗೆಲ್ಲ ಈ ಮೂಲಕ ಹೇಳ ಬಯಸುತ್ತೇನೆಂದರೆ ಪಾಕಿಸ್ತಾನ ಸರಕಾರದ ನಿರ್ದೇಶನದಂತೆ ಐಎಸ್ಐ ಕಾರ್ಯವೆಸಗುತ್ತಿದೆ ಎಂದು ತಿಳಿಸಿದ್ದಾರೆ.
ಸರಕಾರದ ನೆರವಿಲ್ಲದೆ ಐಎಸ್ಐ ಸಂಸ್ಥೆ ರಾಷ್ಟ್ರೀಯ ಆಸಕ್ತಿ ವಿರುದ್ಧ ಏನನ್ನು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಐಎಸ್ಐ ಯಾವುದೇ ಕ್ರಮ ಕೈಗೊಂಡಲ್ಲಿ ನಮ್ಮ ಸಂಪೂರ್ಣ ಬೆಂಬಲ ಸಂಸ್ಥೆಗಿರುತ್ತದೆ ಎಂದಿದ್ದಾರೆ.