ಇಸ್ಲಾಮಾಬಾದ್, ಗುರುವಾರ, 28 ಏಪ್ರಿಲ್ 2011( 12:30 IST )
ಪಾಕಿಸ್ತಾನ ನೌಕಾಪಡೆಯ ಬಸ್‌ವೊಂದರಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಎರಡು ಮಂದಿ ಮೃತಪಟ್ಟಿರುವುದಾಗಿ ವರದಿಗಳು ಹೇಳಿವೆ.
ಕರಾಚಿಯ ದಕ್ಷಿಣ ಭಾಗ ಪ್ರದೇಶದಲ್ಲಿರುವ ಬಂದರು ನಗರ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ಹುದುಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಕಾಪಡೆಯ ಕೇಂದ್ರ ಸಮೀಪವಿರುದ ಶಾರಾ ಇ ಫೈಸಲ್ ರಸ್ತೆಯಲ್ಲಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮಂಗಳವಾರವಷ್ಟೇ ನಡೆದಿದ್ದ ಇಂತಹುದೇ ದಾಳಿಯಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದರಲ್ಲದೆ 56 ಮಂದಿ ಗಾಯಗೊಂಡಿದ್ದರು.
ಭಯೋತ್ಪಾದನೆಗೆ ಭದ್ರತಾ ಪಡೆಗಳು ತೀವ್ರ ಬೆದರಿಕೆಯಾಗಿರುವ ಹಿನ್ನಲೆಯಲ್ಲಿ ಉಗ್ರಗಾಮಿಗಳು ಇಂತಹ ದಾಳಿ ನಡೆಸುವ ಮೂಲಕ ಭೀತಿ ಹುಟ್ಟಿಸಲು ಮುಂದಾಗುತ್ತಿವೆ ಎಂದು ಹೇಳಲಾಗಿದೆ.