ವೃತ್ತಿ ನಿರತರು ಕೆಲಸ ಮಾಡುವಾಗ ಅನಾರೋಗ್ಯಕ್ಕೀಡಾದರೆ ಒಂದೋ ಎರಡೋ ಅನಾರೋಗ್ಯ ರಜೆ (ಸಿಕ್ ಲೀವ್) ಹಾಕುತ್ತಾರೆ. ತೀರಾ ಗಂಭೀರ ಸಮಸ್ಯೆಗಳಿದ್ದರೆ ಹೆಚ್ಚೆಂದರೆ ಒಂದು ತಿಂಗಳು ರಜೆ ಹಾಕಬಹುದು. ಆದರೆ ಲಂಡನ್‌ನಲ್ಲಿದ್ದ ಭಾರತೀಯ ಮೂಲದ ಮಹಿಳಾ ಪೊಲೀಸ್ ಪೇದೆಯೊಬ್ಬರು ಬರೋಬ್ಬರಿ 850 ಅನಾರೋಗ್ಯ ರಜೆ ತೆಗೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕೆಲಸದ ಒತ್ತಡದ ಮತ್ತಿತರ ಕಾರಣಗಳಿಂದಾಗಿ ಹೀನಾ ಪ್ರಕಾಶ್ (43), ಕೆಲವು ದಿನ ಕೆಲಸ ಮಾಡಿದ ನಂತರ ಅನಾರೋಗ್ಯಕ್ಕೊಳಗಾಗುತ್ತಿದ್ದರು. ನಂತರ ಮರಳಿ ಕಚೇರಿಗೆ ಹಾಜರಾಗುತ್ತಿದ್ದರು. ಇದೊಂದು ನಿರಂತರ ಪ್ರಕ್ರಿಯೆಯಾಗಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಆಕೆ ವಾರ್ಷಿಕ ಸರಾಸರಿ 170 ರಜೆ ತೆಗೆದುಕೊಂಡಿದ್ದು ತಿಳಿದು ಬಂದಿದೆ.
ಪದೇ ಪದೇ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದ ಹೀನಾ ತಮ್ಮನ್ನು ಕೆಲಸದಿಂದ ತೆಗೆಯುವ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ.