ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅದ್ದೂರಿ ವಿವಾಹ; ಪ್ರಿನ್ಸ್ ವಿಲಿಯಮ್ ವೆಡ್ಸ್ ಕೇಟ್ ಕ್ಯಾಥರಿನ್ (Prince William | Kate Middleton | Westminster | Buckingham | marries)
PTI
ಬ್ರಿಟನ್ ರಾಜಕುಮಾರ ವಿಲಿಯಮ್ ಹಾಗೂ ಕೇಟ್ ಕ್ಯಾಥರೀನ್ ಶುಕ್ರವಾರ ಬ್ರಿಟನ್ ವೆಸ್ಟ್‌ಮಿನಿಸ್ಟರ್ ಆಬಿ ಚರ್ಚ್‌ನ ರೆವರೆಂಡ್ ಜಾನ್ ಹಾಲ್‌ನಲ್ಲಿ ಹಸೆಮಣೆಗೆ ಏರಿದರು. ಶತಮಾನದ ಈ ಅದ್ದೂರಿ ವಿವಾಹವನ್ನು ಜಗತ್ತಿನಾದ್ಯಂತ ಟಿವಿ ಪರದೆಯ ಮೂಲಕ ಕೋಟ್ಯಂತರ ಜನರು ವೀಕ್ಷಿಸಿದರು.

ವಿಲಿಯಮ್ ಮತ್ತು ಕ್ಯಾಥರೀನ್ ಅವರ ಎಂಟು ವರ್ಷಗಳ ಪ್ರೀತಿಗೆ ಅಧಿಕೃತ ರಾಜಮುದ್ರೆ ಬಿದ್ದಂತಾಗಿದ್ದು, ಇಂದು 1900 ವಿಶೇಷ ಗಣ್ಯರ ಸಮ್ಮುಖದಲ್ಲಿ ಉಂಗುರ ತೊಡಿಸಿಕೊಳ್ಳುವುದರೊಂದಿಗೆ ಸತಿಪತಿಗಳಾದರು. ಶ್ವೇತವರ್ಣದ ಬಟ್ಟೆಯಲ್ಲಿ ಕೇಟ್ ಶೃಂಗಾರಗೊಂಡಿದ್ದರೆ, ವೇಲ್ಸ್ ರಾಜಕುಮಾರ ವಿಲಿಯಮ್ ಐರಿಶ್‌ಗಾರ್ಡ್ ಉಡುಗೆಯಲ್ಲಿ ಎಲ್ಲರ ಗಮನಸೆಳೆದರು.

ಸುದೀರ್ಘಾವಧಿಯ ನಂತರ ಬ್ರಿಟನ್ ರಾಜಮನೆತನದಲ್ಲಿ ನಡೆದ ಈ ಅದ್ದೂರಿ ವಿವಾಹ ಸಮಾರಂಭಕ್ಕೆ ದೇಶ-ವಿದೇಶಗಳಿಂದ ಪ್ರತಿಷ್ಠಿತ ಗಣ್ಯರು ಆಗಮಿಸಿ ಶುಭ ಹಾರೈಸಿದರು. ರಾಜಕುಮಾರ ವಿಲಿಯಮ್ ಹಾಗೂ ಕೇಟೆ ಮಿಡ್ಲ್‌ಟನ್ ಜೋಡಿಯ ವಿವಾಹ ವಿಶ್ವದ ಹತ್ತು ಅದ್ದೂರಿ ವಿವಾಹಗಳಲ್ಲಿ ಒಂದಾಗಿದೆ.

ವಧು ಕೇಟ್ ಉಡುಗೆ ಬೆಲೆ 2.5ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮದುವೆ ಸಂದರ್ಭದಲ್ಲಿ ಮಾಡಲಾಗುವ ಪ್ರತಿಜ್ಞೆಯಲ್ಲಿ ಗಂಡ ಪ್ರಿನ್ಸ್ ವಿಲಿಯಮ್‌ಗೆ ವಿಧೇಯಳಾಗಿರುವೆ ಎಂದು ಪ್ರಮಾಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಕೇಟ್‌ಗೆ ವಿಲಿಯಮ್ ಇಂದು ಕೇವಲ ಉಂಗುರ ತೊಡಿಸುವ ಮೂಲಕ ಸತಿಪತಿಗಳಾದರು. ಈ ಹಿಂದೆ ಕ್ವೀನ್ ಡಯಾನಾ ಕೂಡ ರಾಜಮನೆತನದ ಸಂಪ್ರದಾಯವಾದ ಇಂತಹುದೇ ಪ್ರತಿಜ್ಞೆ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವಿಲಿಯಮ್- ಕೇಟೆ ಮಿಡ್ಲ್‌ಟನ್ ಕಿಸ್:
ಶತಮಾನದ ಅದ್ದೂರಿ ವಿವಾಹ ಎಂದೇ ಬಿಂಬಿಸಲ್ಪಟ್ಟ ರಾಜಕುಮಾರ ವಿಲಿಯಮ್ ಹಾಗೂ ಕೇಟೆ ಮಿಡ್ಲ್‌ಟನ್ ವಿವಾಹದ ಹಿನ್ನೆಲೆಯಲ್ಲಿ ಬಕಿಂಗ್‌ಹ್ಯಾಮ್ ಅರಮನೆ ಹೊರಭಾಗದಲ್ಲಿ ಬೃಹತ್ ಜನಸ್ತೋಮವೇ ನೆರೆದಿತ್ತು. ಈ ಸಂದರ್ಭದಲ್ಲಿ ಅರಮನೆಯ ಬಾಲ್ಕನಿಗೆ ಬಂದ ವಿಲಿಯಮ್-ಕೇಟೆ ಕಿಸ್ ಕೊಟ್ಟು ಜನರತ್ತ ಕೈಬೀಸಿದರು.

ರಾಜಮಾತೆ ಎಲಿಜಬೆತ್, ಡೇವಿಡ್ ಹಾಗೂ ವಿಕ್ಟೋರಿಯಾ ಬೆಕ್‌ಹ್ಯಾಮ್, ಫುಟ್‌ಬಾಲ್ ತಾರೆಯರು, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಸೇರಿದಂತೆ 46 ವಿದೇಶಿ ರಾಜವಂಶಸ್ಥರು ಈ ಅದ್ದೂರಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಡ್ಯೂಕ್ ಆಫ್ ಕೇಂಬ್ರಿಜ
ಪ್ರಿನ್ಸ್ ವಿಲಿಯಮ್ ಅವರನ್ನು ಡ್ಯೂಕ್ ಆಫ್ ಕೇಂಬ್ರಿಡ್ಜ್ ಹಾಗೂ 29 ವರ್ಷ ವಯಸ್ಸಿನ ಕೇಟ್ ಮಿಡ್ಲ್‌ಟನ್ ಅವರನ್ನು ಡಚೆಸ್ ಆಫ್ ಕೇಂಬ್ರಿಡ್ಜ್ ಎಂದು ಬ್ರಿಟನ್ ರಾಣಿ ಎಲಿಜಬೆತ್ ಘೋಷಿಸಿದರು. ಯುವ ರಾಜ ವಿಲಿಯಮ್ ಹಾಗೂ ಕೇಟ್ ಮಿಡ್ಲ್‌ಟನ್ ವಿವಾಹ ನಡೆದ ನಂತರ ರಾಣಿ ಡ್ಯೂಕ್ ಮತ್ತು ಡಚೆಸ್ ಆಗಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದರು. ಆ ನಿಟ್ಟಿನಲ್ಲಿ ಈಗ ವಿಲಿಯಂ ಬ್ರಿಟನ್ ಸಿಂಹಾಸನದ ಯುವರಾಜ.

ಮದುವೆ ಖರ್ಚು 350 ಕೋಟಿ!
ವಿಲಿಯಮ್ ಹಾಗೂ ಕೇಟ್ ಮದುವೆ ಈ ಶತಮಾನದ ವೈಭವೋಪೇತ ಮದುವೆಯಾಗಿದೆ. ಇದಕ್ಕೆ ಸುಮಾರು 350 ಕೋಟಿ ರೂಪಾಯಿ ವ್ಯಯಿಯಲಾಗಿದೆ. ಮದುವೆ ವೇಳೆಯ ಭದ್ರತೆಗೆ 33 ಮಿಲಿಯನ್ ಡಾಲರ್ ವೆಚ್ಚ ಮಾಡಲಾಗಿದೆ. ಬಕಿಂಗ್ ಹ್ಯಾಮ್ ಅರಮನೆ ಹಾಗೂ ವೆಸ್ಟ್‌ಮಿನಿಸ್ಟರ್ ಅಬೇ ಚರ್ಚ್ ಬಳಿ 5000 ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. 35 ಸ್ನಿಪ್ಪರ್ ನಾಯಿಗಳನ್ನು ಕೂಡ ಭದ್ರತೆಗೆ ಬಳಸಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಹೂ ಅಲಂಕಾರಕ್ಕೆ ಸುಮಾರು 3.85 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ವೆಸ್ಟ್ ಮಿನಿಸ್ಟರ್ ಹಾಗೂ ಅಬ್ಬೆ ಚರ್ಚ್ ಹಾಗೂ ಬಕಿಂಗ್‌ಹ್ಯಾಮ್ ಅರಮನೆಯನ್ನು ಹೂಗಳಿಂದ ಶೃಂಗರಿಸಲಾಗಿತ್ತು.
ಇವನ್ನೂ ಓದಿ