ಬುಡಕಟ್ಟು ಪ್ರದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಡ್ರೋನ್ ದಾಳಿಯನ್ನು ನಿಲ್ಲಿಸಬೇಕೆಂದು ಪಾಕಿಸ್ತಾನ ಒತ್ತಡ ಹೇರುತ್ತಿರುವ ಹಿನ್ನಲೆಯಲ್ಲಿ ತಮ್ಮ ಡ್ರೋನ್ ತಳಹದಿಯನ್ನು ಅಫಘಾನಿಸ್ತಾನಕ್ಕೆ ಬದಲಾಯಿಸುವ ಮೂಲಕ ಅಲ್ಲಿಂದ ದಾಳಿಯನ್ನು ಮುಂದುವರಿಸುವ ಇರಾದೆಯನ್ನು ಅಮೆರಿಕಾ ಹೊಂದಿದೆ.
ಉಗ್ರರ ದಮನದ ಏಕೈಕ ಉದ್ದೇಶದೊಂದಿಗೆ ಪಾಕಿಸ್ತಾನದ ಬುಡುಕಟ್ಟು ಪ್ರದೇಶದಲ್ಲಿ ಅಮೆರಿಕಾ ದಾಳಿ ಮುಂದುವರಿಸಿದೆ. ಆದರೆ ಅಮೆರಿಕಾ ನಡೆಸುತ್ತಿರುವ ಡ್ರೋನ್ ದಾಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಪಾಕ್ ಆರೋಪಿಸುತ್ತಲೇ ಬಂದಿವೆ. ಈ ಹಿನ್ನಲೆಯಲ್ಲಿ ಡ್ರೋನ್ ತಳಹದಿಯನ್ನು ಪಾಕ್‌ಗೆ ಗಡಿ ಪ್ರದೇಶಕ್ಕೆ ತಾಗಿಕೊಂಡಿರುವ ಅಪ್ಘಾನ್‌ಗೆ ಬದಲಾಯಿಸುವ ಇರಾದೆಯನ್ನು ಅಮೆರಿಕಾ ಹೊಂದಿದ್ದು, ಆ ಮೂಲಕ ಉಗ್ರರ ವಿರುದ್ಧ ದಾಳಿ ಮುಂದುವರಿಸಲು ಯೋಜನೆ ಹಾಕಿಕೊಂಡಿದೆ.
ನೈಋತ್ಯ ಬಲೂಚಿಸ್ತಾನ ನಗರ ಪ್ರದೇಶವಾದ ಖ್ವೇಟಾದಿಂದ ಶಾಮ್ಸಿ ಏರ್‌ಬೇಸ್‌ನಿಂದ ಡ್ರೋನ್ ಪಡೆಯನ್ನು ತೆರವುಗೊಳಿಸುವವಂತೆ ಅಮೆರಿಕಾ ಮೇಲೆ ಪಾಕ್ ಒತ್ತಡ ಹೇರಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದವು.