ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯಾಟೋ ದಾಳಿ; ಗಡಾಫಿ ಸೇಫ್-ಪುತ್ರ, ಮೊಮ್ಮಕ್ಕಳು ಬಲಿ (Libya | Muammar Gaddafi | Nato air strike | TRIPOLI | United Nations)
ನ್ಯಾಟೋ ಪಡೆ ನಡೆಸಿದ ಮಿಸೈಲ್ ದಾಳಿಯಲ್ಲಿ ಲಿಬಿಯಾ ಸರ್ವಾಧಿಕಾರಿ ಮೊಅಮ್ಮರ್ ಗಡಾಫಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರೆ, ಕಿರಿಯ ಪುತ್ರ ಹಾಗೂ ಮೂರು ಮೊಮ್ಮಕ್ಕಳು ಸಾವನ್ನಪ್ಪಿರುವುದಾಗಿ ಸರಕಾರದ ವಕ್ತಾರರು ತಿಳಿಸಿದ್ದಾರೆ.

ಶನಿವಾರವಷ್ಟೇ ಕದನ ವಿರಾಮ ಒಪ್ಪಂದಕ್ಕೆ ಬದ್ಧ, ಆದರೆ ಅಧಿಕಾರದ ಗದ್ದುಗೆ ಬಿಡಲ್ಲ ಎಂದು ಗಡಾಫಿ ಬಹಿರಂಗವಾಗಿ ಘೋಷಿಸಿದ ಕೆಲ ಹೊತ್ತಿನಲ್ಲೇ ನ್ಯಾಟೋ ಪಡೆ ಗಡಾಫಿ ನಿವಾಸದ ಮೇಲೆ ಮಿಸೈಲ್ ದಾಳಿ ನಡೆಸಿದೆ.

ಲಿಬಿಯಾದಲ್ಲಿ ಏನು ನಡೆಯುತ್ತಿದೆ, ಇದೇನು ಅರಣ್ಯ ನ್ಯಾಯವೇ ಎಂದು ಕಿಡಿಕಾರಿರುವ ಸರಕಾರದ ವಕ್ತಾರ ಮೌಸ್ಸಾ ಇಬ್ರಾಹಿಂ, ಹಾಗಾಗಿ ಲಿಬಿಯಾದಲ್ಲಿ ಏನಾಗುತ್ತಿದೆ ಎಂಬುದು ಇದೀಗ ಸ್ಪಷ್ಟವಾಗಿದೆ. ಒಟ್ಟಿನಲ್ಲಿ ದೇಶದ ನಾಗರಿಕರನ್ನು ರಕ್ಷಿಸುವುದು ಕೂಡ ಕಷ್ಟವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮೊಅಮ್ಮರ್ ಗಡಾಫಿ 1969ರಲ್ಲಿ ಲಿಬಿಯಾದ ಅಧ್ಯಕ್ಷಗಾದಿಗೆ ಏರಿದ್ದರು. ಆದರೆ ಇದೀಗ ಕಳೆದ 42 ವರ್ಷಗಳಿಂದ ಸರ್ವಾಧಿಕಾರ ನಡೆಸುತ್ತಿರುವ ಗಡಾಫಿ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ಆರೋಪಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಗಡಾಫಿ ಅಧಿಕಾರ ತ್ಯಜಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಏತನ್ಮಧ್ಯೆ ಗಡಾಫಿ ಪಡೆಯ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ದಾಳಿ ನಡೆಸುವಂತೆ ಫ್ರಾನ್ಸ್ ನೇತೃತ್ವದ ಪಡೆಗೆ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸುವ ಮೂಲಕ ಗ್ರೀನ್ ಸಿಗ್ನಲ್ ನೀಡಿತ್ತು.

ಶನಿವಾರ ನ್ಯಾಟೋ ಪಡೆ ನಡೆಸಿದ ಮಿಸೈಲ್ ದಾಳಿಯಲ್ಲಿ ಗಡಾಫಿ ಕಿರಿಯ ಪುತ್ರ ಸೈಫ್ ಅಲ್ ಅರಾಬ್ (29) ಹಾಗೂ ಮೂವರು ಮೊಮ್ಮಕ್ಕಳು ಸಾವನ್ನಪ್ಪಿದ್ದಾರೆ. ದಾಳಿ ಸಂದರ್ಭದಲ್ಲಿ ಗಡಾಫಿ ಹಾಗೂ ಆತನ ಪತ್ನಿ ಕೂಡ ಜತೆಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಇವನ್ನೂ ಓದಿ