ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಮಟಾಷ್; ದಾಳಿ ಹೇಗೆ ನಡೆಯಿತು ಗೊತ್ತಾ? (Osama bin Laden | Pakistan | helicopter raid | US | Barck obama)
PR
ಜಗತ್ತಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಪಾಕಿಸ್ತಾನದ ಮಿಲಿಟರಿ ಅಕಾಡೆಮಿ ಸಮೀಪದ ಅಬೋಟಾಬಾದ್ ಎಂಬಲ್ಲಿ ಅಮೆರಿಕ ನೇತೃತ್ವದ ಸೇನಾಪಡೆ ಹೆಲಿಕಾಪ್ಟರ್ ದಾಳಿ ನಡೆಸುವ ಮೂಲಕ ಹತ್ಯೆಗೈದಿದೆ.

ಕಾರ್ಯಾಚರಣೆ ಹೇಗೆ ನಡೆಯಿತು?:
ಇಸ್ಲಾಮಾಬಾದ್‌ನಿಂದ ನೂರು ಕಿ.ಮೀ. ದೂರದ ಪ್ರಮುಖ ಪ್ರವಾಸಿ ತಾಣವಾಗಿರುವ ಬಿಲಾಲ್ ಪ್ರದೇಶದ ಅಬೋಟಾಬಾದ್ ನ ಕಟ್ಟಡವೊಂದರಲ್ಲಿ ಒಸಾಮಾ ಬಿನ್ ಲಾಡೆನ್ ತನ್ನ ಸಹಚರರ ಜೊತೆ ಠಿಕಾಣಿ ಹೂಡಿರುವ ಖಚಿತ ಮಾಹಿತಿ ಪಡೆದ ಅಮೆರಿಕ ಪಡೆಯ ನಾಲ್ಕು ಹೆಲಿಕಾಪ್ಟರ್ ಭಾನುವಾರ ರಾತ್ರಿ ಏಕಕಾಲದಲ್ಲಿ ದಾಳಿ ನಡೆಸಿರುವುದಾಗಿ ಪಾಕ್ ಮತ್ತು ಅಮೆರಿಕ ಸೇನಾಪಡೆ ಅಧಿಕಾರಿಗಳು ವಿವರಿಸಿದ್ದಾರೆ.

ಈ ದಾಳಿ ನಡೆಸುವ ಮುನ್ನ ಆ ಪ್ರದೇಶದಲ್ಲಿನ ಮಹಿಳೆಯರು, ಪುರುಷರು ಹಾಗೂ ಮಕ್ಕಳನ್ನು ಸೇನೆ ಮುಂಜಾಗ್ರತಾ ಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿತ್ತು. ಲಾಡೆನ್ ಪಡೆಗೆ ಪ್ರತಿರೋಧ ತೋರಲು ಅವಕಾಶ ನೀಡದಂತೆ ದಾಳಿ ನಡೆಸಲಾಗಿತ್ತು ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PR
ಒಟ್ಟಾರೆ ಕಳೆದ ಹತ್ತು ವರ್ಷಗಳ ಕಾಲ ಜಾಗತಿಕವಾಗಿ ಕಂಟಕನಾಗಿದ್ದ ಉಗ್ರ ಒಸಾಮಾ ಬಿನ್ ಲಾಡೆನ್ ದಾಳಿಯಲ್ಲಿ ಸಾವನ್ನಪ್ಪುವ ಮೂಲಕ ಅಮೆರಿಕದ ಆಪರೇಶನ್ ಸಕ್ಸಸ್ ಆಗಿದೆ ಎಂದು ಹೇಳಿದ್ದಾರೆ.

ಡಿಎನ್ಎ ಪರೀಕ್ಷೆಯಿಂದ ಲಾಡೆನ್ ಹತ್ಯೆ ದೃಢ:
ಒಸಾಮಾ ಬಿನ್ ಲಾಡೆನ್ ಈಗಾಗಲೇ ಹತ್ಯೆಯಾಗಿದ್ದಾನೆ...ಒಸಾಮಾ ಬದುಕಿದ್ದಾನೆ ಹೀಗೆ ಹಲವಾರು ಊಹಾಪೋಹಗಳು ದಶಕಗಳಿಂದಲೂ ಹರಿದಾಡುತ್ತಲೇ ಇತ್ತು. ಏತನ್ಮಧ್ಯೆ ಭಾನುವಾರ ಅಮೆರಿಕ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಲಾಡೆನ್ ನಿಜಕ್ಕೂ ಸಾವನ್ನಪ್ಪಿದ್ದಾನೆಯೇ ಎಂಬ ಪ್ರಶ್ನೆ ಈಗಲೂ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಆ ನಿಟ್ಟಿನಲ್ಲಿ ಮೃತ ಲಾಡೆನ್‌ನ ಡಿಎನ್ಎ ಪರೀಕ್ಷೆ ನಡೆಸಿದ ಅಮೆರಿಕ ಆತನ ಹತ್ಯೆಯನ್ನು ಖಚಿತಪಡಿಸಿದೆ.

ಲಾಡೆನ್ ಶವವನ್ನು ಬಾಗ್ರಾಮ್ ಮಿಲಿಟರಿ ನೆಲೆಗೆ ಒಯ್ಯಲಾಗಿದೆ. ಅಷ್ಟೇ ಅಲ್ಲ ಲಾಡೆನ್ ಶವ ವೀಕ್ಷಣೆಗೆ ಮಾಧ್ಯಮಗಳಿಗೂ ಆಹ್ವಾನ ನೀಡಲಾಗಿದೆ.

ಅಮೆರಿಕದಾದ್ಯಂತ ಹೈ ಅಲರ್ಟ್:
ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಹತ್ಯೆಯ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಹೈಅಲರ್ಟ್ ಘೋಷಿಸಿದೆ. ಅದೇ ರೀತಿ ಅಮೆರಿಕದ ಪ್ರಜೆಗಳು ಯಾವೆಲ್ಲ ದೇಶದಲ್ಲಿದ್ದಾರೆ ಅಲ್ಲೆಲ್ಲಾ ಕಟ್ಟೆಚ್ಚರ ವಹಿಸುವಂತೆ ಅಮೆರಿಕ ಸೂಚನೆ ನೀಡಿದೆ.
ಇವನ್ನೂ ಓದಿ