ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡೆತ್ ವಾರಂಟ್; ಲಾಡೆನ್ ಹತ್ಯೆಗೆ ಏ.29ರಂದೇ ಒಬಾಮಾ ಸಹಿ! (Osma Bin Laden | Barack Obama | America | Pakistan,)
PTI
ವಿಶ್ವಕ್ಕೆ ಕಂಟಕಪ್ರಾಯನಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಲ್ ಖಾಯಿದಾ ವರಿಷ್ಠಾ ಒಸಾಮಾ ಬಿನ್ ಲಾಡೆನ್ ಜಾಡು ಪತ್ತೆ ಹಿಡಿದಿದ್ದ ಅಮೆರಿಕ ಸೇನಾಪಡೆ ಎಲ್ಲವನ್ನೂ ರಹಸ್ಯವಾಗಿಟ್ಟಿತ್ತು. ಈ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಜತೆ ಸಿಐಎ ಅಧಿಕಾರಿಗಳು ಐದು ಬಾರಿ ಮಾತುಕತೆ ನಡೆಸಿದ ನಂತರ ಲಾಡೆನ್ ಹತ್ಯೆಗೆ ಏಪ್ರಿಲ್ 29ರಂದು ಒಬಾಮಾ ಅಂತಿಮ ಮುದ್ರೆ ಒತ್ತಿದ್ದರು.

ಲಾಡೆನ್ ಅಬೋಟಾಬಾದ್‌ನಲ್ಲಿ ಠಿಕಾಣಿ ಹೂಡಿರುವ ಬಗ್ಗೆ ಅಮೆರಿಕಕ್ಕೆ 2010 ಆಗಸ್ಟ್ ತಿಂಗಳಿನಲ್ಲಿಯೇ ಗಮನಕ್ಕೆ ಬಂದಿತ್ತು. ಆತನ ಬಲಗೈ ಬಂಟರು ಹಾಗೂ ಆತನ ಐಶಾರಾಮಿ ನಿವಾಸಕ್ಕೆ ಆಗಮಿಸುವವರ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದ ಅಮೆರಿಕ ಸೂಕ್ತ ಸಮಯಕ್ಕಾಗಿ ಕಾಯುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತೂ ಅಧ್ಯಕ್ಷ ಬರಾಕ್ ಒಬಾಮಾ ಅಲಬಾಮಗೆ ತೆರಳುವ ಮುನ್ನ ಸ್ವತಃ ಏಪ್ರಿಲ್ 29ರ ಬೆಳಿಗ್ಗೆ ವೇಳೆಗೆ ಈ ರಹಸ್ಯ ಕಾರ್ಯಾಚರಣೆಗೆ ರಾಜತಾಂತ್ರಿಕ ಕೊಠಡಿಯಲ್ಲಿ ಅಂತಿಮ ಅನುಮತಿ ನೀಡಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದೇ ವೇಳೆ ಶ್ವೇತಭವನದ ರಾಜತಾಂತ್ರಿಕ ಕೊಠಡಿಯಲ್ಲಿ ಉಪಸ್ಥಿತರಿದ್ದ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಾಮ್ ಡಾನಿಲನ್ ಅವರು ಕಾರ್ಯಾಚರಣೆಯ ಅಧಿಕೃತ ಆದೇಶಗಳನ್ನು ಸಿದ್ದಪಡಿಸಿದ್ದರಲ್ಲದೆ, ಮಧ್ಯಾಹ್ನ ವೇಳೆ ಸಭೆ ಕರೆದು ಯೋಜನೆಯನ್ನು ಪೂರ್ಣಗೊಳಿಸಿದ್ದರು.

ವ್ಯವಸ್ಥಿತ ತಂತ್ರದ ಮೂಲಕ ದಿಢೀರ್ ಕಾರ್ಯಾಚರಣೆ ನಡೆಸಿದ ಅಮೆರಿಕ ಪಡೆ ಮೇ 1ರಂದು ರಾತ್ರಿ ಅಬೋಟಾಬಾದ್‌ನಲ್ಲಿನ ಲಾಡೆನ್ ಐಶಾರಾಮಿ ನಿವಾಸದ ಮೇಲೆ ದಾಳಿ ನಡೆಸಿ ಹತ್ಯೆಗೈದಿತ್ತು.
ಇವನ್ನೂ ಓದಿ