'ಅಯ್ಯೋ...ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಸಾವಿನ ಸುದ್ದಿ ಸುಳ್ಳಾಗಲಿ' ಎಂದು ಪ್ರಾರ್ಥಿಸುತ್ತೇವೆ. ಆದರೆ ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ಅದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿಯೂ ಜಿಹಾದಿಸ್ಟ್ ಫೋರಂನ ಸದಸ್ಯರು ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.
ಒಟ್ಟಾರೆ ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರ ಜಿಹಾದಿಸ್ಟ್ಗಳ ಮೊದಲ ಪ್ರತಿಕ್ರಿಯೆ ಇದಾಗಿದೆ. ಓಹ್...ದೇವರೆ, ಲಾಡೆನ್ ಸಾವಿನ ಸುದ್ದಿ ಸುಳ್ಳಾಗಲಿ...ಒಬಾಮಾನಿಗೆ ದೇವರ ಶಾಪ ತಟ್ಟಲಿ ಎಂದು ಜಿಹಾದಿಸ್ಟ್ ಸದಸ್ಯರು ತಿಳಿಸಿದ್ದಾರೆ.
ಒಂದು ವೇಳೆ ಒಸಾಮಾ ಬಿನ್ ಲಾಡೆನ್ ಸಾವನ್ನಪ್ಪಿದ್ದೇ ಹೌದಾದಲ್ಲಿ, ಆತನ ಜಿಹಾದ್ ಸಂದೇಶ ಮಾತ್ರ ಯಾವತ್ತಿಗೂ ಸಾಯುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಸಹೋದರ...ಸಹೋದರಿಯರೇ ಸ್ವಲ್ಪ ಕಾಯಿರಿ, ಆತನ ಸಾವು ಖಚಿತವೇ ಆಗಿದ್ದರೆ ಅದು ಕೂಡ ನಮಗೆ ಆಶೀರ್ವಾದವಾಗಲಿದೆ ಎಂದು ಇಸ್ಲಾಮಿಸ್ಟ್ ಫೋರಂನ ಜಿಹಾದಿಗಳು ವಿಶ್ವಾಸವ್ಯಕ್ತಪಡಿಸಿದ್ದಾರೆ.