ಪಾಕಿಸ್ತಾನ ನೆಲದಲ್ಲಿ ಒಸಾಮಾ ಬಿನ್ ಲಾಡೆನ್ ವಿರುದ್ಧ ಅಮೆರಿಕಾ ನಡೆಸಿರುವ ಕಾರ್ಯಾಚರಣೆಯು ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಶರ್ರಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾಡೆನ್ ಕಾರ್ಯಾಚರಣೆಯ ವೇಳೆ ಅಮೆರಿಕಾ ಪಾಕಿಸ್ತಾನ ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿರುವ ಮುಶರ್ರಫ್, ಅಬೊಟಾಬಾದ್‌ನಲ್ಲಿ ಲಾಡೆನ್ ವಾಸವಾಗಿದ್ದರು ಎನ್ನುವುದು ಆಶ್ವರ್ಯ ತಂದಿದೆ ಎಂದರು.
ಲಾಡೆನ್ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎಂಬ ವಿಚಾರವನ್ನು ಪದೇ ಪದೇ ನಿರಾಕರಿಸುತ್ತಾ ಬಂದಿದ್ದ ಮುಶರ್ರಫ್, ಅಬೊಟಾಬಾದ್‌ದಲ್ಲಿ ಆತ ಹೇಗೆ ಕಂಡುಬಂದಿದ್ದ ಎಂಬುದು ಅಚ್ಚರಿಯಾಗಿದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಅಲ್-ಖೈದಾ ಮುಖ್ಯಸ್ಥನ ಹತ್ಯೆಯು ಪಾಕ್ ಜನತೆಗೆ ಹಾಗೇ ವಿಶ್ವದ ಎಲ್ಲ ಶಾಂತಿಪ್ರಿಯರ ಪಾಲಿಗೆ ಒಂದು ವಿಜಯವಾಗಿದೆ ಎಂದಿದ್ದಾರೆ.
2001ರಲ್ಲಿ ಅಮೆರಿಕಾದ ವಲ್ಡ್ ಟ್ರೇಡ್ ಸೆಂಟರ್‌ಗೆ ಲಾಡೆನ್ ದಾಳಿ ನಡೆಸಿದ ಸಂದರ್ಭದಲ್ಲಿ ಮುಶರ್ರಫ್ ಪಾಕಿಸ್ತಾನ ಅಧ್ಯಕ್ಷರಾಗಿದ್ದರು.