ಜಗತ್ತಿನ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹತ್ಯೆಯ ಸುದ್ದಿ ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲೂ ದಾಖಲೆ ಬರೆದಿದೆಯಂತೆ!
ಟ್ವಿಟರ್‌ನಲ್ಲಿ ಪ್ರತಿ ಸೆಕೆಂಡಿಗೆ 3,440ರಂತೆ ಟ್ವಿಟ್ ದಾಖಲಾಗಿದ್ದವು ಎಂದು ಸಿಎನ್ಎನ್ ವರದಿ ಮಾಡಿದೆ. ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕಾ ಸೇನಾಪಡೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಬಿನ್ ಲಾಡೆನ್ ಹತ್ಯೆಗೀಡಾಗಿದ್ದ.
ಇದಾದ ಬೆನ್ನಲ್ಲೇ ಲಾಡೆನ್ ಹತ್ಯೆ ಸುದ್ದಿಯನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅಧಿಕೃತವಾಗಿ ಘೋಷಿಸುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಪ್ರತಿ ಸೆಕೆಂಡಿಗೆ 3,440ರಂತೆ ಟ್ವಿಟ್ ದಾಖಲಾಗಿದ್ದವು.
ರಾತ್ರಿ 10.45ರಿಂದ-2.20ರ ವರೆಗಿನ ಅವಧಿಯಲ್ಲಿ ಪ್ರತಿ ಸೆಕೆಂಡಿಗೆ 3000 ಸರಾಸರಿಯಲ್ಲಿ ಟ್ವಿಟ್ ದಾಖಲಾಗಿದ್ದವು ಎಂದು ಸಿಎನ್ಎನ್ ವರದಿ ಹೇಳಿದೆ. ಆ ಮೂಲಕ ಲಾಡೆನ್ ಮಟಾಷ್ ಸುದ್ದಿಯನ್ನು ಪ್ರಚಾರ ಮಾಡುವಲ್ಲಿ ಎಲ್ಲರೂ ತಲ್ಲೀನರಾಗಿದ್ದರು.