ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಲಾಡೆನ್‌ ಬಂಗಲೆ ನಿರ್ಮಿಸಿದ ಗುತ್ತಿಗೆದಾರನ ಸೆರೆ (Osama bin Laden | Contractor | arrested | Gull Muhammad | CIA)
ಅಮೆರಿಕ ಸಿಐಎ ವಿಶೇಷ ಪಡೆಯ ದಾಳಿಯಲ್ಲಿ ಹತನಾದ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ಗೆ ಇಸ್ಲಾಮಾಬಾದ್‌ನ ಅಬೋಟಾಬಾದ್‌ನಲ್ಲಿ ಐಶಾರಾಮಿ ಮನೆ ನಿರ್ಮಿಸಿಕೊಟ್ಟ ಗುತ್ತಿಗೆದಾರನನ್ನು ಅಮೆರಿಕ ಸೇನಾ ಪಡೆ ಬಂಧಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಪಾಕಿಸ್ತಾನದ ಗುಪ್ತಚರ ಇಲಾಖೆ ಗುತ್ತಿಗೆದಾರ ಗುಲ್ಲ್ ಮುಹಮ್ಮದ್ ಅಲಿಯಾಸ್ ಮಾಡಾ ಎಂಬಾತನನ್ನು ಬಂಧಿಸಿರುವುದಾಗಿ ಆನ್‌ಲೈನ್ ನ್ಯೂಸ್ ಏಜೆನ್ಸಿ ವಿವರಿಸಿದ್ದು, ಆ ವ್ಯಕ್ತಿಯ ವಯಸ್ಸು 45-50ರ ಆಸುಪಾಸು ಎಂದು ತಿಳಿಸಿದೆ.

ಅಬೋಟಾಬಾದ್‌ನ ಬಿಲಾಲ್ ಬಡಾವಣೆಯಲ್ಲಿ 2003ರಲ್ಲಿಯೇ ಈ ನಿವಾಸವನ್ನು ನಿರ್ಮಿಸಲಾಗಿತ್ತು. 2005ರಲ್ಲಿ ಇದನ್ನು ಐಶಾರಾಮಿ ಬಂಗಲೆಯನ್ನಾಗಿ ಪುನರ್ ನಿರ್ಮಾಣ ಮಾಡಲಾಗಿತ್ತು ಎಂದು ಟಿವಿ ಚಾನೆಲ್ ವರದಿಯೊಂದು ಹೇಳಿದೆ.

ಇಸ್ಲಾಮಾಬಾದ್‌ನ ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಒಸಾಮಾ ಬಿನ್ ಲಾಡೆನ್ ಕಳೆದ ಐದಾರು ವರ್ಷಗಳಿಂದ ವಾಸವಾಗಿದ್ದರೂ ಕೂಡ ಪಾಕಿಸ್ತಾನ ಸರಕಾರಕ್ಕೆ ತಿಳಿದಿಲ್ಲ ಎಂಬ ವಿಚಾರದ ಕುರಿತು ಅಮೆರಿಕದ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೀಗ ಲಾಡೆನ್ ಕುರಿತ ಒಂದೊಂದೇ ವಿವರಗಳು ಬಯಲಾಗತೊಡಗಿದೆ. ಮತ್ತೊಂದೆಡೆ ಪಾಕಿಸ್ತಾನ ಕೂಡ ಇಕ್ಕಟ್ಟಿಗೆ ಸಿಲುಕಿದೆ.

ಲಷ್ಕರ್ ವಿರುದ್ಧ ಕ್ರಮ ಕೈಗೊಳ್ಳಿ-ಪಾಕ್‌ಗೆ ಅಮೆರಿ
ಪಾಕಿಸ್ತಾನದಲ್ಲಿಯೇ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಅಮೆರಿಕ ಸೇನಾಪಡೆಗಳು ಹತ್ಯೆಗೈದ ನಂತರ ಇದೀಗ, ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿಯಾದ ಲಷ್ಕರ್ ಇ ತೊಯ್ಬಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕಿ ಉರ್ ರೆಹಮಾನ್ ಮತ್ತು ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಮೆರಿಕದ ರಾಯಭಾರಿ ಟಿಮೋತಿ ಜೆ ರೋಮರ್ ತಿಳಿಸಿದ್ದಾರೆ.

ಲಾಡೆನ್ ಮನೆ ಹಿಜ್ಬುಲ್ ಸಂಘಟನೆಗೆ ಸೇರಿದ್ದಾ?
ಅಬೋಟಾಬಾದ್‌ನಲ್ಲಿ ಲಾಡೆನ್ ವಾಸ್ತವ್ಯ ಹೂಡಿದ್ದ ಮನೆಯನ್ನು ಹಿಜ್ಬುಲ್ ಮುಜಾಹಿದ್ದೀನ್ ಕೊಂಡಿಕೊಂಡಿತ್ತು. ಅದೇ ವೇಳೆ ಲಾಡೆನ್ ಮನೆ ಯಾರ ಕೈವಶವಿದೆ ಎಂಬುದನ್ನು ಬಹಿರಂಗಪಡಿಸಲು ಪಾಕ್ ನಿರಾಕರಿಸುತ್ತಿದೆ ಎಂದು ಕೆನಡಾದ ದೈನಿಕವೊಂದು ವರದಿ ಮಾಡಿದೆ. ಇದೇ ಮನೆಯಲ್ಲಿ ಸುತ್ತಲೂ ಪಾಕಿಸ್ತಾನ ಮಿಲಿಟರಿ ಅಧಿಕಾರಿಗಳು ವಾಸಿಸುತ್ತಿದ್ದ ಪ್ರದೇಶದಲ್ಲಿ ಈತನೂ ವಾಸ್ತವ್ಯ ಹೂಡಿದ್ದಾನೆಂದರೆ, ಅದಕ್ಕೆ ಪಾಕಿಸ್ತಾನ ಮಿಲಿಟರಿಯ ಸಹಕಾರ ಇರಲೇಬೇಕೆಂದು ಪತ್ರಿಕೆ ಹೇಳಿದೆ.
ಇವನ್ನೂ ಓದಿ