ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಪಾಕಿಸ್ತಾನ ನೆರೆ ಸಂತ್ರಸ್ತರಿಗೆ ನೆರವು ಕೊಡಬೇಡಿ' (Hillary Clinton | Osama bin Laden | Republican Congresswoman | Pakistan flood victims)
'ಪಾಕಿಸ್ತಾನ ನೆರೆ ಸಂತ್ರಸ್ತರಿಗೆ ನೆರವು ಕೊಡಬೇಡಿ'
ವಾಷಿಂಗ್ಟನ್, ಗುರುವಾರ, 5 ಮೇ 2011( 12:25 IST )
ಪಾಕಿಸ್ತಾನ ನೆರೆ ಸಂತ್ರಸ್ತರಿಗೆ ನೀಡುವ ಆರ್ಥಿಕ ನೆರವನ್ನು ಅಮೆರಿಕಾ ತಕ್ಷಣ ನಿಲುಗಡೆಗೊಳಿಸುವಂತೆ ಆಗ್ರಹಿಸಲಾಗಿದೆ. ಇದೇ ಪ್ರದೇಶದಲ್ಲಿ ಅಮೆರಿಕಾ ಸೇನಾಪಡೆ ನಡೆಸಿರುವ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಹತ್ಯೆಯಾಗಿರುವ ಹಿನ್ನಲೆಯಲ್ಲಿ ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ರಿಪಬ್ಲಿಕನ್ ಕಾಂಗ್ರೆಸ್‌ವುಮನ್ ಕೇ ಗ್ರಾಂಗರ್ ಮನವಿ ಮಾಡಿಕೊಂಡಿದ್ದಾರೆ.
ಅಬೋಟಾಬಾದ್‌ನಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಲಾಡೆನ್ ಹತ್ಯೆಗೀಡಾಗಿದ್ದರು. ಇದರಿಂದಾಗಿ ಪಾಕ್ ಮತ್ತು ಅಮೆರಿಕಾ ನಡುವೆ ಪ್ರಕ್ಷುಬ್ಧತೆಯ ವಾತಾವರಣ ನಿರ್ಮಾಣವಾಗುವಂತಾಗಿದೆ.
ಪಾಕಿಸ್ತಾನ ಜತೆಗಿನ ಬಾಂಧವ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇ ಗ್ರಾಂಗರ್, ಪಾಕಿಸ್ತಾನ ಏಜೆನ್ಸಿಗಳಿಗೆ ನೀಡಲು ಉದ್ದೇಶವಿರಿಸಿದ್ದ 200 ಮಿಲಿಯನ್ ಸಹಾಯಧನ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನ ಮಿಲಿಟರಿ ನೆಲೆಯಿಂದ ಕೇವಲ ನೂರು ಯಾರ್ಡ್ ದೂರದಲ್ಲೇ ಕಳೆದ ಐದು ವರ್ಷಗಳಿಂದ ಜಗತ್ತಿನ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಅವಿತು ಕುಳಿತಿದ್ದರು. ಅಲ್ಲದೆ ಅಮೆರಿಕಾ ಸಹಾಯಧನವನ್ನು ಪಾಕ್ ಸರಕಾರವು ಪಾರದರ್ಶಕತೆಯಿಂದ ವಿತರಣೆ ಮಾಡುವಲ್ಲಿ ವಿಫಲವಾಗಿದೆ ಎಂದು ವಿದೇಶ ನೆರವು ಸಮಿತಿಯ ಪ್ರಮುಖರಾಗಿರುವ ಗ್ರಾಂಗರ್ ಆರೋಪಿಸಿದ್ದಾರೆ.