ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಲಾಡೆನ್‌ಗೆ ಐಎಸ್‌ಐ ಅಧಿಕಾರಿಗಳಿಂದಲೇ ರಕ್ಷಣೆ..! (Pakistan | ISI |Laden | America)
ಅಲ್-ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಹತ್ಯೆಗೀಡಾಗಿರುವುದು ಇದೀಗ ಹಳೆಯ ವಿಚಾರ. ಆದರೆ ಅಮೆರಿಕಾ ಸೇನಾಪಡೆಯು ಪಾಕಿಸ್ತಾನದಲ್ಲೇ ನಡೆಸಿರುವ ಕಾರ್ಯಾಚರಣೆಯಲ್ಲಿ ಲಾಡೆನ್ ಹತ್ಯೆಯಾಗಿರುವುದು ಪಾಕ್‌ನ ನಿಜಬಣ್ಣ ಬಯಲಾಗಲು ಕಾರಣವಾಗಿದೆ.

ಲಾಡೆನ್ ಪಾಕ್‌ನಲ್ಲಿ ಅವಿತಿದ್ದರು ಎಂಬ ವಿಚಾರ ಹಲವು ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾಗಿರುವ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್‌ನಿಂದಲೇ (ಐಎಸ್‌ಐ) ಲಾಡೆನ್ ಅವರಿಗೆ ರಕ್ಷಣೆ ದೊರೆಯುತ್ತಿತ್ತು ಎಂದು ಹೆಸರು ಹೇಳ ಇಚ್ಛಿಸದ ಯುರೋಪ್ ಅಧಿಕಾರಿಗಳು ಬಹಿರಂಗಪಡಿಸಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿವೆ.

ಪಾಕಿಸ್ತಾನ ಮಿಲಿಟರಿ ಅಥವಾ ಇಂಟೆಲಿಜೆನ್ಸ್ ಏಜೆನ್ಸಿಯಿಂದ ನಿವೃತ್ತಿ ಹೊಂದಿದ್ದ ಕೆಲವು ಅಧಿಕಾರಿಗಳು ಲಾಡೆನ್‌ಗೆ ಸಂರಕ್ಷಣೆ ನೀಡುತ್ತಿದ್ದರು. ಇದರಿಂದಾಗಿ ಅಬೋಟಾಬಾದ್ ಮಿಲಿಟರಿ ನೆಲೆಯ ಸಮೀಪದಲ್ಲೇ ಲಾಡೆನ್ ಅವಿತುಕೊಳ್ಳಲು ಸಾಧ್ಯವಾಗಿತ್ತು ಎಂದು ಅಮೆರಿಕಾ ಮತ್ತು ಯುರೋಪ್ ಗುಪ್ತಚರ ಇಲಾಖೆಗೆ ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಇದಕ್ಕೆ ಪೂರಕವೆಂಬಂತೆ ಬಿನ್ ಲಾಡೆನ್ ಅವಿತಿದ್ದ ಮನೆಯಿಂದ ಕಂಪ್ಯೂಟರ್, ಶೇಖರಣಾ ಡ್ರೈವ್ ಮತ್ತು ಇತರ ಸಾಮಾಗ್ರಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಡೈಲಿ ವರದಿ ಮಾಡಿವೆ.
ಇವನ್ನೂ ಓದಿ