ದಕ್ಷಿಣ ಬಾಗ್ದಾದ್‌ನ ಹಿಲಾಹ್ ನಗರದಲ್ಲಿ ಗುರುವಾರ ಸಂಭವಿಸಿರುವ ಶಕ್ತಿಶಾಲಿ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 15 ಮಂದಿ ಬಲಿಯಾಗಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ದಕ್ಷಿಣ ಬಾಗ್ದಾದ್‌ನಿಂದ 90 ಕಿ. ಮೀ. ದೂರದಲ್ಲಿರುವ ಬಲ್ಲಿ ಪ್ರಾಂತ್ಯದ ಹಿಲಾಹ್ ನಗರದಲ್ಲಿ ಪೊಲೀಸ್ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಸ್ಫೋಟಕಗಳನ್ನು ತುಂಬಿದ ಕಾರನ್ನು ಸ್ಫೋಟಸಲಾಗಿದೆ.
ಅಲ್-ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಹತ್ಯೆ ನಂತರ ಇರಾಕ್‌ನ ಬಾಗ್ದಾದ್‌ನಲ್ಲಿ ಹೈ ಎಲರ್ಟ್ ಘೋಷಿಸಲಾಗಿತ್ತು. ಈ ನಡುವೆಯೂ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಇರಾಕ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಗಣನೀಯ ಕುಸಿತ ಕಂಡುಬಂದಿರುವ ಹೊರತಾಗಿಯೂ ಬಾಂಬ್ ಸ್ಫೋಟ ಪದೇ ಪದೇ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.