ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆದ್ಧೂರಿ ಮದುವೆಯನ್ನು ಹಿಂದಿಕ್ಕಿದ ಲಾಡೆನ್ ಹತ್ಯೆ ಸುದ್ದಿ (Osama Bin Laden | al-Qaeda | Royal Wedding | Barack Obama)
ಅಲ್-ಖೈದಾ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಹತ್ಯೆ ಸುದ್ದಿಯು ವಿಶ್ವದ ಅದ್ಧೂರಿ ಮದುವೆ ರಾಜಕುಮಾರ ವಿಲಿಯಂ-ಕೇಟ್ ಮಿಡ್ಲ್‌ಟನ್ ವಿವಾಹ ವಾರ್ತೆಯನ್ನು ಹಿಂದಿಕ್ಕಿದ್ದು, 20ನೇ ಶತಮಾನದ ಮೂರನೇ ಅತಿ ದೊಡ್ಡ ಸುದ್ದಿ ಎನಿಸಿಕೊಂಡಿದೆ.

ಹತ್ತು ವರ್ಷಗಳ ಹಿಂದೆ ವಿಶ್ವ ವಾಣಿಜ್ಯ ಕೇಂದ್ರವನ್ನು ಹೊಡೆದುರುಳಿಸಿದ್ದ ಉಗ್ರ ಲಾಡೆನ್‌ರನ್ನು ಪಾಕಿಸ್ತಾನದಲ್ಲಿ ಅಮೆರಿಕಾ ಸೇನಾಪಡೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು.

ಪ್ರಿನ್ಸ್ ವಿಲಿಯಂ-ಕೇಟ್ ವಿವಾಹ ಸುದ್ದಿ ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಲಾಡೆನ್ ಮಟಾಷ್ ಸುದ್ದಿ ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆ ಗಿಟ್ಟಿಸಿಕೊಂಡಿದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ.

ಆಸ್ಟಿನ್ ಮೂಲದ ಜಾಗತಿಕ ಭಾಷಾ ಮಾನೀಟರ್ ನಡೆಸಿರುವ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ಚೀನಾ ಅಗ್ರಪಂಕ್ತಿಯ ರಾಷ್ಟ್ರವಾಗಿ ಪರಿವರ್ತನೆಯಾಗಿರುವುದು ಹಾಗೂ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಚುನಾವಣಾ ವಾರ್ತೆಯು ಅಗ್ರ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ.

ಜಗತ್ತಿನ ಅತಿ ದುಬಾರಿ ಮದುವೆ ಎನಿಸಿಕೊಂಡಿದ್ದ ಪ್ರಿನ್ಸ್ ವಿಲಿಯಂ-ಕೇಟ್ ಮಿಡ್ಲ್‌ಟನ್ ವಿವಾಹದ ವಾರ್ತೆಯು ಐದನೇ ಹಾಗೂ ಮೈಕಲ್ ಜಾಕ್ಸನ್ ಸಾವಿನ ಸುದ್ದಿ ಆರನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಜಾಗತಿಕ ರಾಜತಾಂತ್ರಿಕತೆ ಬಗ್ಗೆ ಹಲವು ರಹಸ್ಯಗಳನ್ನು ಬಯಲುಗೊಳಿಸಿದ್ದ ವಿಕಿಲೀಕ್ಸ್ ನಾಲ್ಕನೇ ಹಾಗೂ ಜಪಾನ್‌ನಲ್ಲಿ ಕಳೆದ ತಿಂಗಳು ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿ ಸುದ್ದಿಯು ಎಂಟನೇ ಸ್ಥಾನ ಪಡೆದಿವೆ.

ಆದರೆ ಅಗ್ರ 20ರ ಪಟ್ಟಿಯಲ್ಲಿ ಯಾವುದೇ ಭಾರತೀಯ ಸುದ್ದಿ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.
ಇವನ್ನೂ ಓದಿ