ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಐದು ವರ್ಷಗಳಿಂದ ಅಬೋಟಾಬಾದ್‌ನಲ್ಲಿ ಲಾಡೆನ್ ಅವಿತಿದ್ದ' (Abbottabad | Osama Bin Laden | Pakistan | al-Qaeda)
ಭಯೋತ್ಪಾದಕ ಒಸಮಾ ಬಿನ್ ಲಾಡೆನ್‌ ಪತ್ತೆಗಾಗಿ ಪಾಕಿಸ್ತಾನ ಬುಡಕಟ್ಟು ಪ್ರದೇಶದಲ್ಲಿ ಅಮೆರಿಕಾ ಸೇನಾಪಡೆಯು ತೀವ್ರ ಶೋಧ ಕಾರ್ಯಾಚರಣೆ ನಡೆಸಿತ್ತು. ಆದರೆ ಕಳೆದೈದು ವರ್ಷಗಳಿಂದ ಲಾಡೆನ್ ಅಬೋಟಾಬಾದ್‌ನಲ್ಲೇ ಅವಿತಿದ್ದ ಎಂಬ ಆಘಾತಕಾರಿ ಅಂಶವನ್ನು ಉಗ್ರ ಲಾಡೆನ್ ಪತ್ನಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನ ಮಿಲಿಟರಿ ನೆಲೆಯ ಸಮೀಪದ ಅಬೋಟಾಬಾದ್‌ನಲ್ಲಿ ಅಮೆರಿಕಾ ಸೇನಾಪಡೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಲಾಡೆನ್ ಹತ್ಯೆಗೀಡಾಗಿದ್ದ. ಆದರೆ ಇದೇ ಆವರಣದೊಳಗೆ ಕಳೆದ ಐದು ವರ್ಷಗಳಲ್ಲಿ ಲಾಡೆನ್ ವಾಸಿಸುತ್ತಿದ್ದ ಎಂದು ಹೆಸರು ಹೇಳ ಬಯಸದ ಪಾಕ್ ಮಿಲಿಟರಿ ಅಧಿಕಾರಿಗಳಿಗೆ ಆಕೆ ತಿಳಿಸಿರುವುದಾಗಿ ಜಿಯೋ ನ್ಯೂಸ್ ಚಾನೆಲ್ ವರದಿ ಮಾಡಿವೆ.

ಅಬೋಟಾಬಾದ್‌ ಬಂಗಲೆಯ ಎರಡು ಮೂರು ಕೋಣೆಯೊಳಗೆ ಲಾಡೆನ್ ವಾಸಿಸುತ್ತಿದ್ದ. ಅಲ್ಲಿ ಅವಿತಿದ್ದ ಲಾಡೆನ್ ಒಂದು ದಿನ ಬಂದಿರಲಿಲ್ಲವಾಗಿತ್ತು ಎಂದು ಅಧಿಕಾರಿಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಅಬೋಟಾಬಾದ್‌ನಲ್ಲೇ ಲಾಡೆನ್ ಮೂವರು ಪತ್ನಿ ಹಾಗೂ ಮಕ್ಕಳನ್ನು ಬಂಧಿಸಲಾಗಿತ್ತು.
ಇವನ್ನೂ ಓದಿ