ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಇನ್ನೂ ಸತ್ತಿಲ್ಲವಂತೆ!: ಪಾಕ್‌ ಜನರ ನಂಬಿಕೆ (Pakistan | Osama Bin Laden | US | Osama hideout)
ಪಾಕಿಸ್ತಾನದ ಅಬೋಟೊಬಾದ್‌ನಲ್ಲಿ ಅಮೆರಿಕಾ ಸೇನಾಪಡೆಯು ನಡೆಸಿರುವ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವುದು ನಿಜವಾಗಿಯೂ ಅಲ್-ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ನಿಜಕ್ಕೂ ಹೌದೇ..?. ಅಲ್ಲ ಎನ್ನುತ್ತಿದ್ದಾರೆ ಪಾಕಿಸ್ತಾನ ಬಹುತೇಕ ಮಂದಿ ವಿದ್ಯಾವಂತರು..!

ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಗ್ಲೋಬಲ್ ಪೋಲ್‌ಸ್ಟೆರ್ ಯುಗೋವ್ ಮತ್ತು ಪೊಲಿಸ್ ನಡೆಸಿರುವ ಅಂತರ್ಜಾಲ ಸಮೀಕ್ಷೆಯಲ್ಲಿ ಈ ಕುತೂಹಲಕಾರಿ ಅಂಶ ಬಹಿರಂಗವಾಗಿದೆ. ಇದರಂತೆ ಇಸ್ಲಾಮಾಬಾದ್‌ನ 80 ಕೀ.ಮೀ ದೂರದಲ್ಲಿ ಅಮೆರಿಕಾ ಸೇನಾಪಡೆಯಲ್ಲಿ ಬಲಿಯಾಗಿರುವುದು ಅಲ್‌-ಖೈದಾ ಮುಖ್ಯಸ್ಥ ಒಸಾಮಾ ಅಲ್ಲ ಎಂದು ಶೇಕಡಾ 66ರಷ್ಟು ಪಾಕಿಸ್ತಾನಿಯರು ಈಗಲೂ ನಂಬಿಕೊಂಡಿದ್ದಾರೆ.

ಕರಾಚಿ, ಇಸ್ಲಾಮಾಬಾದ್ ಮತ್ತು ಕರಾಚಿ ನಗರ ಪ್ರದೇಶದಲ್ಲಿನ ಬಹುತೇಕ ವಿದ್ಯಾವಂತರೇ ಇಂತಹದೊಂದು ವಿಶ್ವಾಸ ಹೊಂದಿದ್ದಾರೆಂದು ವರದಿ ತಿಳಿಸಿದೆ. ಸಮೀಕ್ಷೆಯಿಂದ ಅಲ್ಪ ವಿದ್ಯಾವಂತರು ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಹೊರಗಿಡಲಾಗಿತ್ತು ಎಂದು ಸಂಘಟಕರು ತಿಳಿಸಿದ್ದಾರೆ.

ಪಾಕಿಗಳಿಗೆ ಗೊತ್ತಿತ್ತು...
ಅದೇ ರೀತಿ ಲಾಡೆನ್ ಪಾಕ್‌ನಲ್ಲೇ ಅಡಗಿದ್ದಾನೆ ಎಂಬ ವಿಚಾರ ಅಲ್ಲಿನ ಜನರಿಗೆ ಮೊದಲಿಂದಲೇ ತಿಳಿದಿತ್ತು ಎಂದು ಐವರಲ್ಲಿ ನಾಲ್ಕು ಅಮೆರಿಕರನ್ನು ಅಭಿಪ್ರಾಯ ಪಡುತ್ತಾರೆ ಎಂದು ಮತ್ತೊಂದು ಸಮೀಕ್ಷೆಯು ಬಹಿರಂಗಪಡಿಸಿದೆ.

ಅಮೆರಿಕಾದಲ್ಲಿ ಫೋನ್ ಮುಖಾಂತರ ನಡೆಸಲಾದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಅದೇ ರೀತಿ ಪಾಕಿಸ್ತಾನಕ್ಕೆ ನೀಡಿಕೊಂಡು ಬರುತ್ತಿರುವ ಎಲ್ಲ ಸಹಾಯಧನವನ್ನು ತಕ್ಷಣ ನಿಲ್ಲಿಸಬೇಕು ಎಂದು ಸಹ ಅಮೆರಿಕಾದ ಜನರು ಬೇಡಿಕೆಯಿರಿಸಿದ್ದಾರೆ.
ಇವನ್ನೂ ಓದಿ