ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಿಬಿಯಾ ಸರ್ವಾಧಿಕಾರಿ ಗಡಾಫಿ ಜೀವಂತವಾಗಿದ್ದಾರೆಯೇ? (Muammar Gaddafi, Libya, Tripoli, dead or alive, NATO)
ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಸಾವನ್ನಪ್ಪಿದ್ದಾರೆಯೇ ಅಥವಾ ಬದುಕುಳಿದಿದ್ದಾರೆಯೇ ಎಂಬ ಬಗ್ಗೆ ತಮಗೆ ಖಚಿತ ಮಾಹಿತಿ ಇಲ್ಲ ಎಂದು ನ್ಯಾಟೋ ತಿಳಿಸಿದ್ದು, ಆದರೆ ತಾವು ಗಡಾಫಿಯನ್ನು ಕೊಲ್ಲುವ ಉದ್ದೇಶ ಇಟ್ಟುಕೊಂಡು ಯಾವುದೇ ದಾಳಿ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

ನ್ಯಾಟೋ ಗಡಾಫಿ ಮಿಲಿಟರಿ ಪಡೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದೆ. ಗಡಾಫಿ ಪಡೆ ಮತ್ತು ಅವರ ಬಂಕರ್‌ಗಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳುವುದೇ ನಮ್ಮ ಉದ್ದೇಶವಾಗಿದೆ ಎಂದು ನ್ಯಾಟೋ ವಕ್ತಾರ ಕ್ಲೌಡಿಯೋ ಗಾಬೆಲ್ಲಿನಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಅಷ್ಟೇ ಅಲ್ಲ ನ್ಯಾಟೋ ವೈಯಕ್ತಿಕವಾಗಿ ಯಾರ ಮೇಲೂ ದಾಳಿ ನಡೆಸಿಲ್ಲ ಎಂದು ವಿವರಿಸಿದ್ದಾರೆ. ಗಡಾಫಿ ಇನ್ನೂ ಜೀವಂತವಾಗಿದ್ದಾರೆಯೇ ಎಂಬ ಪ್ರಶ್ನೆಗೆ ಇಟಲಿಯ ನ್ಯಾಟೋ ಜನರಲ್ ಕ್ಲೌಡಿಯೋ ವೀಡಿಯೋ ಮೂಲಕ ಪ್ರತಿಕ್ರಿಯಿಸಿದ್ದು, ಆ ಬಗ್ಗೆ ನಮ್ಮಲ್ಲಿ ಯಾವುದೇ ಪುರಾವೆ ಇಲ್ಲ. ಗಡಾಫಿ ಈಗ ಏನು ಮಾಡುತ್ತಿದ್ದಾರೆ ಎಂಬುದು ಕೂಡ ತಿಳಿದಿಲ್ಲ ಎಂದು ಹೇಳಿದ್ದಾರೆ.

ಕಳೆದ 42 ವರ್ಷಗಳ ಕಾಲದಿಂದ ಲಿಬಿಯಾವನ್ನು ಆಳುತ್ತಿದ್ದ ಮುಅಮ್ಮರ್ ಗಡಾಫಿ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಗಡಾಫಿ ಸೇನಾಪಡೆ ಹತ್ತಿಕ್ಕಲು ಯತ್ನಿಸುತ್ತಿದ್ದಾಗ, ವಿಶ್ವಸಂಸ್ಥೆ, ಅಮೆರಿಕ ಮಧ್ಯಪ್ರವೇಶಿಸಿತ್ತು. ಅಲ್ಲದೇ ಗಡಾಫಿ ನೇತೃತ್ವದ ಪಡೆ ವಿರುದ್ಧ ಕಾರ್ಯಾಚರಣೆ ನಡೆಸಲು ನ್ಯಾಟೋ ಮೈತ್ರಿಕೂಟದ ಸೇನೆ ಲಿಬಿಯಾದಲ್ಲಿ ಮಾರ್ಚ್ 31ರಂದು ಕಾರ್ಯಾಚರಣೆ ಆರಂಭಿಸಿತ್ತು.

ಒಂದು ಹಂತದಲ್ಲಿ ಗಡಾಫಿಯನ್ನು ಗುರಿಯಾಗಿಟ್ಟುಕೊಂಡು ಅವರ ನಿವಾಸದ ಮೇಲೆ ನ್ಯಾಟೋ ದಾಳಿ ನಡೆಸಿದ ಪರಿಣಾಮ ಗಡಾಫಿ ಪುತ್ರ ಹಾಗೂ ಮೂವರು ಮೊಮ್ಮಕ್ಕಳು ಬಲಿಯಾಗಿದ್ದರು. ಈ ಸಂದರ್ಭದಲ್ಲಿ ಗಡಾಫಿ ಹಾಗೂ ಪತ್ನಿ ಮನೆಯಲ್ಲಿ ಇದ್ದಿದ್ದರು. ಅವರು ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಇವನ್ನೂ ಓದಿ