ಅಲ್ ಖಾಯಿದಾ ಸಂಘಟನೆಯ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಕೊಲ್ಲುವ ಮೂಲಕ ಅಮೆರಿಕ ಭಾರಿ ದೊಡ್ಡ ತಪ್ಪು ಮಾಡಿದೆ, ಅಲ್ಲದೇ ಲಾಡೆನ್ ಹತ್ಯೆ ಗಂಭೀರ ಪಾಪ ಎಂದು ಅಲ್ ಖಾಯಿದಾ ಹೇಳಿದೆ.
ಉಗ್ರಗಾಮಿ ಸಂಘಟನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಮೇ 2ರಂದು ಪಾಕಿಸ್ತಾನದ ಅಬೋಟಾಬಾದ್‌ನ ನಿವಾಸದಲ್ಲಿ ಲಾಡೆನ್‌ನನ್ನು ಹತ್ಯೆಗೈದ ಅಮೆರಿಕನ್ನರು ಭಾರಿ ಬೆಲೆ ತೆರಲಿದ್ದಾರೆ ಎಂಬುದಾಗಿ ಎಚ್ಚರಿಕೆ ನೀಡಿದೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾಗೆ ಸೇನೆ ಭದ್ರತೆಯನ್ನು ಒದಗಿಸುತ್ತದೆ. ಆದರೆ, ಸಾಮಾನ್ಯ ಅಮೆರಿಕನ್ನರಿಗೆ ಯಾರು ಭದ್ರತೆ ಒದಗಿಸುತ್ತಾರೆ. ಹಾಗಾಗಿ ತಾಕತ್ತಿದ್ದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ನಾವು ಖಂಡಿತವಾಗಿಯೂ ಲಾಡೆನ್ ಹತ್ಯೆ ಸೇಡನ್ನು ತೀರಿಸಿಕೊಳ್ಳುತ್ತೇವೆ ಎಂದು ಸವಾಲು ಹಾಕಿದೆ.