ಮುಂಬೈ ದಾಳಿ ಪ್ರಶ್ನೆ ಬಗ್ಗೆ ಉತ್ರ ಕೊಡಿ: ಪಾಕ್‌ಗೆ ಅಮೆರಿಕ
ವಾಷಿಂಗ್ಟನ್, ಬುಧವಾರ, 18 ಮೇ 2011( 09:44 IST )
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಿ-ಕೆನಡಾ ಪ್ರಜೆ ತೌವ್ವೂರ್ ಹುಸೈನ್ ರಾಣಾನ ವಿಚಾರಣೆ ಚಿಕಾಗೋ ಕೋರ್ಟ್‌ನಲ್ಲಿ ನಡೆಯುತ್ತಿದ್ದರೆ, ಮತ್ತೊಂದೆಡೆ 26/11 ದಾಳಿ ಕುರಿತ ಪ್ರಶ್ನೆಗೆ ಪಾಕಿಸ್ತಾನ ಸ್ಪಷ್ಟ ಪ್ರತಿಕ್ರಿಯೆ ನೀಡಬೇಕೆಂದು ಅಮೆರಿಕ ತಾಕೀತು ಮಾಡಿದೆ.
ಮುಂಬೈ ದಾಳಿ ಆರೋಪಕ್ಕೆ ಕುರಿತಂತೆ ಪಾಕಿಸ್ತಾನ ಸರಕಾರ ವಿವರಣೆ ನೀಡುವಂತೆ ನಾವು ಕೇಳಿದ್ದೇವೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಮಾರ್ಕ್ ಟೋನರ್ ತಿಳಿಸಿದ್ದಾರೆ.
ಪ್ರಮುಖ ವಾಣಿಜ್ಯನಗರಿ ಮುಂಬೈ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್(ಐಎಸ್ಐ) ಶಾಮೀಲಾಗಿದೆಯೇ ಎಂಬ ಆರೋಪದ ಕುರಿತ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಏತನ್ಮಧ್ಯೆ ಅವರು ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡಿಲ್ಲ. ಈಗಾಗಲೇ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಹೆಚ್ಚಿನ ವಿವರ ನೀಡುವುದು ಸರಿಯಲ್ಲ ಎಂದರು.