ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರುವಾಂಡ ಮಿಲಿಟರಿ ಮಾಜಿ ವರಿಷ್ಠನಿಗೆ 30 ವರ್ಷ ಜೈಲು (Rwanda | ex-army | genocide | UN court | Augustin)
1994ರಲ್ಲಿ ಜನಾಂಗೀಯ ಹತ್ಯಾಕಾಂಡ ನಡೆಸಿದ ಘಟನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ರುವಾಂಡ ಮಿಲಿಟರಿಯ ಮಾಜಿ ವರಿಷ್ಠ ಆಗೊಸ್ಟಿನ್ ಬಿಝಿಮುನ್‌ಗು ಅವರಿಗೆ ವಿಶ್ವಸಂಸ್ಥೆ ಕೋರ್ಟ್ 30 ವರ್ಷಗಳ ಜೈಲುಶಿಕ್ಷೆ ಮಂಗಳವಾರ ವಿಧಿಸಿದೆ.

1994ರಲ್ಲಿ ನಡೆದ ಈ ಘಟನೆಯಲ್ಲಿ ಸುಮಾರು 800,000 ಜನರು ಹತ್ಯೆಗೀಡಾಗಿದ್ದರು. ಅಲ್ಲದೇ ಪೊಲೀಸ್ ಅರೆಸೇನಾಪಡೆಯ ಮಾಜಿ ಮುಖ್ಯಸ್ಥ ಆಗೊಸ್ಟಿನ್ ನದಿನ್ದಿಲಿಯೆಮಾನಾ ಅವರನ್ನು ಕೂಡ ದೋಷಿ ಎಂದು ತೀರ್ಪು ನೀಡಿದೆ. ಆದರೆ ನದಿನ್ದಿಲಿಯೆಮಾನಾ ಬಂಧನದ ಅವಧಿಯಿಂದ ಇಲ್ಲಿಯವರೆಗೆ 11 ವರ್ಷಗಳ ಜೈಲುಶಿಕ್ಷೆ ಅನುಭವಿಸಿದ್ದರಿಂದ ಬಿಡುಗಡೆ ಮಾಡುತ್ತಿರುವುದಾಗಿ ಕೋರ್ಟ್ ಹೇಳಿತು.

1994 ಏಪ್ರಿಲ್ 6ರಂದು ಪ್ರಾರಂಭಗೊಂಡ ಜನಾಂಗೀಯ ಹತ್ಯೆ ಕಾರ್ಯಾಚರಣೆ ಸಂದರ್ಭದಲ್ಲಿ ಮಿಲಿಟರಿ ವರಿಷ್ಠರಾಗಿದ್ದ ಬಿಝಿಮುನ್‌ಗು ಅವರು ಪೂರ್ಣ ಹಿಡಿತ ಹೊಂದಿದ್ದರು. ನದಿನ್ದಿಲಿಯೆಮಾನಾ ಸೀಮಿತ ಹಿಡಿದ ಹೊಂದಿದ್ದರು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮಂಗಳವಾರದ ಪ್ರಕರಣದ ಅಂತಿಮ ತೀರ್ಪಿನ ವೇಳೆ ಇಬ್ಬರು ಹಿರಿಯ ಅಧಿಕಾರಿಗಳಿಗೂ ಕೋರ್ಟ್ ಶಿಕ್ಷೆ ವಿಧಿಸಿತ್ತು.

ಮಾಜಿ ಕಮಾಂಡರ್ ಮೇಜರ್ ಫ್ರಾನ್ಸಿಸ್ ಕ್ಸೆವಿಯರ್ ಝೂವೆನೆಮೆಯೆ ಅವರಿಗೆ 20 ವರ್ಷಗಳ ಜೈಲುಶಿಕ್ಷೆ ಹಾಗೂ ಕ್ಯಾಪ್ಟನ್ ಸಾಗಾಹುಟುಗೆ 20 ವರ್ಷ ಜೈಲುಶಿಕ್ಷೆ ನೀಡಿತ್ತು.

ನದಿನ್ದಿಲಿಯೆಮಾನಾ ಅವರನ್ನು ಬೆಲ್ಜಿಯಂನಲ್ಲಿ 2000ನೇ ಇಸವಿ ಜನವರಿಯಲ್ಲಿ ಸೆರೆ ಹಿಡಿಯಲಾಗಿತ್ತು. ಝೂವೆನೆಮೆಯೆ ಅವರನ್ನು ಫೆಬ್ರುವರಿಯಲ್ಲಿ ಬಂಧಿಸಿದ್ದು, 2002ರಲ್ಲಿ ಸಾಗಾಹುಟು ಅವರನ್ನು ಡೆನ್ಮಾರ್ಕ್ ಹಾಗೂ ಬಿಝಿಮುನ್‌ಗು ಅವರನ್ನು ಆಂಗೋಲಾದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ವರದಿಯೊಂದು ವಿವರಿಸಿದೆ.
ಇವನ್ನೂ ಓದಿ