ಅಫ್ಘಾನಿಸ್ತಾನದಲ್ಲಿನ ನ್ಯಾಟೋ ಪಡೆಗಳಿಗೆ ಇಂಧನ ಸರಬರಾಜು ಮಾಡುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಸುಮಾರು 16 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಆಗ್ನೇಯ ಭಾಗದಲ್ಲಿ ಶನಿವಾರ ಬೆಳಿಗ್ಗೆಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಕೂಡ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅದೇ ರೀತಿ ಇಂದು ಬೆಳಿಗ್ಗೆ ಟ್ಯಾಂಕರ್ ಸ್ಫೋಟಗೊಂಡಿದ್ದರಿಂದ ಸುಮಾರು 16 ಮಂದಿ ಸಾವನ್ನಪ್ಪಿದ್ದರು. ಅವರೆಲ್ಲ ಟ್ಯಾಂಕರ್ ಸಮೀಪ ಇಂಧನ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟಗೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ವಿವರಿಸಿದ್ದಾರೆ.
ಮೊದಲ ಸ್ಫೋಟಕ್ಕೆ ಕಾರಣ ಬಾಂಬ್ ಎಂದು ಹೇಳಿರುವ ಅಧಿಕಾರಿಗಳು, ಅಮೆರಿಕ ಬೆಂಬಲಿತ ಪಾಕಿಸ್ತಾನ ಸರಕಾರವನ್ನು ತಾಲಿಬಾನ್ ಉಗ್ರಗಾಮಿ ಸಂಘಟನೆ ಉರುಳಿಸುವ ಚಿಂತನೆ ಮಾಡಿಕೊಂಡಿದೆ. ಅಲ್ಲದೇ ಇಂತಹ ದಾಳಿಗಳನ್ನು ನಡೆಸಿದ್ದು ತಾವೇ ಎಂದು ಹೊಣೆಹೊತ್ತಿಕೊಂಡಿದೆ.
ಇತ್ತೀಗಷ್ಟೇ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕದ ವಿಶೇಷ ಸೇನಾಪಡೆಗಳು ಮೇ 2ರಂದು ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದಿದ್ದವು.