ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ರಾಹುಲ್ ಭಟ್ ಜತೆ ಬಾಲಿವುಡ್ ಎಂಟ್ರಿಗೆ ಯತ್ನಿಸಿದ್ದ ರಾಣಾ' (Tahawwur Hussain Rana | Mumbai attacks | David Coleman Headley | Rahul Bhatt)
'ರಾಹುಲ್ ಭಟ್ ಜತೆ ಬಾಲಿವುಡ್ ಎಂಟ್ರಿಗೆ ಯತ್ನಿಸಿದ್ದ ರಾಣಾ'
ಶಿಕಾಗೋ, ಶುಕ್ರವಾರ, 27 ಮೇ 2011( 15:36 IST )
ಮುಂಬೈ ದಾಳಿ ಪ್ರಕರಣದ ಸಹ ಆರೋಪಿ ತಹಾವುರ್ ಹುಸೇನ್ ರಾಣಾ, ಚಿತ್ರ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರ ರಾಹುಲ್ ಭಟ್ ಮೂಲಕ ಬಾಲಿವುಡ್ ಪ್ರವೇಶಿಸಲು ಮಹತ್ವಾಕಾಂಕ್ಷೆಯ ಯೋಜನೆ ಹೊಂದಿದ್ದ ಎಂದು ಶಿಕಾಗೋ ನ್ಯಾಯಾಲಯದಲ್ಲಿನ ವಿಚಾರಣೆ ವೇಳೆ ಮುಂಬೈ ದಾಳಿ ಪ್ರಕರಣದ ಪ್ರಧಾನ ಆರೋಪಿ, ಪಾಕ್ ಮೂಲದ ಅಮೆರಿಕನ್ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಹೇಳಿದ್ದಾನೆ.
26/11 ದಾಳಿ ಪ್ರಕರಣದ ಸಹ ಆರೋಪಿ ರಾಣಾ ಪರ ವಕೀಲ ಪ್ಯಾಟ್ರಿಕ್ ಡಬ್ಲು ಬ್ಲೆಗಾನ್ ಅವರು ಶಿಕಾಗೋ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಹೆಡ್ಲಿ ಈ ವಿಷಯವನ್ನು ಹೇಳಿದ್ದಾನೆ.
ಮಹೇಶ್ ಭಟ್ ಅವರ ಪುತ್ರ ರಾಹುಲ್ ಭಟ್ ಮೂಲಕ ಚಿತ್ರ ನಿರ್ಮಿಸುವ ಪಾಕ್ ಮೂಲದ ಕೆನಡಾ ಉಗ್ರ ರಾಣಾನ ಯೋಜನೆ ಸಫಲವಾಗಲಿಲ್ಲ. ಲಷ್ಕರ್ ಸಂಘಟನೆಯ ಸಿದ್ಧಾಂತಗಳಿಗೆ ಇದು ವಿರುದ್ಧವಾಗಿದ್ದರಿಂದ ಆ ಸಂಘಟನೆಯ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೆಡ್ಲಿ ತಿಳಿಸಿದ್ದಾನೆ.
ತಾನೊಬ್ಬ ಆರ್ಮಿ ರೇಂಜರ್, ಎಂದು ಹೇಳಿಕೊಳ್ಳುವ ಮೂಲಕ ರಾಹುಲ್ ಭಟ್ ಅವರನ್ನು ಪರಿಚಯಿಸಿಕೊಂಡಿದ್ದಾಗಿ ಕೋರ್ಟ್‌ಗೆ ತಿಳಿಸಿರುವ ಹೆಡ್ಲಿ, ನಂತರ ತಾನು ಅವರನ್ನು ತುಂಬಾ ಇಷ್ಟಪಡಲು ಆರಂಭಿಸಿರುವುದಾಗಿ ವಿವರಿಸಿದ್ದಾನೆ.
ನವೆಂಬರ್ 26ರಂದು ದಕ್ಷಿಣ ಮುಂಬೈಗೆ ಹೋಗದಂತೆ ರಾಹುಲ್ ಭಟ್‌ಗೆ ಹೆಡ್ಲಿ ಹೇಳಿದ್ದ. ಆ ನಂತರ ಮೂರು ದಿನಗಳ ಕಾಲ ಲಷ್ಕರ್ ಸಂಘಟನೆಯ 10 ಮಂದಿ ಉಗ್ರರು ನಡೆಸಿದ ದಾಳಿಯಲ್ಲಿ 160 ಮಂದಿ ಬಲಿಯಾಗಿದ್ದರು.