ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್ ಜೈಲ್ ಬ್ರೇಕ್; 417 ಕೈದಿಗಳು ಎಸ್ಕೇಪ್ (Afghan jailbreak | Interpol issues global alert | Taliban fugitives | Sarposa prison)
ಆಫ್ಘಾನಿಸ್ತಾನದ ಕಂದಾಹಾರ್‌ನಲ್ಲಿರುವ ಸಾರ್‌ಪೋಸಾ ಕಾರಾಗೃಹದಿಂದ ತಾಲಿಬಾನ್ ಉಗ್ರರು ಸೇರಿದಂತೆ 417 ಕೈದಿಗಳು ಪರಾರಿಯಾಗಿದ್ದು, ಇದು ಜಾಗತಿಕ ಭದ್ರತೆಗೆ ಹೆಚ್ಚಿನ ಅಪಾಯ ತಂದೊಡ್ಡಲಿದೆ ಎಂದು ಹೇಳಿರುವ ಇಂಟರ್‌ಪೋಲ್ ವಿಶ್ವಾದ್ಯಂತ ಎಚ್ಚರಿಕೆ ಸಂದೇಶ ಜಾರಿ ಮಾಡಿದೆ.

ಫ್ರಾನ್ಸ್‌ ಮೂಲದ ಅಂತಾರಾಷ್ಠ್ರೀಯ ಪೊಲೀಸ್‌ ಏಜೆನ್ಸಿ ಇಂಟರ್‌ಪೋಲ್, ಏ.24 ರಂದು ಕಾರಾಗೃಹದಿಂದ ಪರಾರಿಯಾಗಿರುವ ಕೈದಿಗಳಿಗೆ ಆರೇಂಜ್‌ ನೋಟಿಸ್‌ ಜಾರಿಗೊಳಿಸಿರುವುದಾಗಿ ತಿಳಿಸಿದೆ.

ಸಾರ್‌ಪೋಸಾ ಜೈಲಿನಲ್ಲಿದ್ದ 480ಕ್ಕೂ ಹೆಚ್ಚು ಕೈದಿಗಳು ತಿಂಗಳಗಳ ಕಾಲ ಸುರಂಗ ಕೊರೆದು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಫ್ಘಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಇಂಟರ್‌ಪೋಲ್‌ ಬಿಡುಗಡೆ ಮಾಡಿರುವ ಕೈದಿಗಳ ಸಂಖ್ಯೆ ಕಡಿಮೆಯಿರುವ ಕುರಿತು ಆಫ್ಘಾನ್‌ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ.