ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ ಯಶಸ್ಸಿಗೆ 'ರಾಣಾ ಹೆಡ್ಲಿಗೆ ಅಭಿನಂದಿಸಿರಲಿಲ್ಲ' (Rana | Did not congratulate | Headley | 26/11 success)
ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಸಹ ಆರೋಪಿ ತಹಾವುರ್‌ ರಾಣಾ, ದಾಳಿಯ ಯಶಸ್ಸಿಗಾಗಿ ದಾಳಿಯ ಪ್ರಧಾನ ಸಂಚುಕೋರ ಡೇವಿಡ್‌ ಹೆಡ್ಲಿ ಹಾಗೂ ಮತ್ತಿತರರಿಗೆ ಅಭಿನಂದನೆ ಸಲ್ಲಿಸಿರಲಿಲ್ಲ ಎಂದು ರಾಣಾ ಪರ ವಕೀಲ ಪಾಟ್ರಿಕ್‌ ಬ್ಲೇಗನ್‌ ತಿಳಿಸಿದ್ದಾರೆ.

ಹೆಡ್ಲಿಗೆ ಆತನ ಸಹೋದರ ಹಮ್ಜಾ ಹಾಗೂ ಪತ್ನಿ ಶಾಜಿಯಾ ಸೇರಿದಂತೆ ಇತರರು ಅಭಿನಂದಿಸಿದ್ದರು, ಆದರೆ ರಾಣಾ ಅಭಿನಂದಿಸಿರಲಿಲ್ಲ ಎಂದು ಆತನ ಪರ ವಕೀಲ ಬ್ಲೇಗನ್ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

ಮುಂಬೈನಲ್ಲಿರುವ ಮೊದಲ ಜಾಗತಿಕ ವಲಸೆ ಕಚೇರಿಯಲ್ಲಿ ವಲಸೆ ಸಲಹೆಗಾರರನ್ನಾಗಿ ರಾಣಾನನ್ನು ಡೇವಿಡ್ ಕೋಲ್ಮನ್ ಹೆಡ್ಲಿ ನೇಮಿಸಿರುವ ಬಗ್ಗೆ ಪ್ರಕರಣದಲ್ಲಿ 50ರ ಹರೆಯದ ರಾಣಾ ವಿರುದ್ಧ ಆರೋಪಿಸಲಾಗಿದೆ.

ಮುಂಬೈದಾಳಿಯಲ್ಲಿ ಹತರಾದ 9 ಮಂದಿ ಉಗ್ರರಿಗೆ ಪಾಕಿಸ್ತಾನದ ಅತ್ಯನ್ನತ ಪದವಿಯಾದ 'ನಿಷಾನ್‌ ಎ ಹೈದರ್‌ ' ನೀಡಬೇಕು ಎಂದು ರಾಣಾ ಈ ಮೊದಲು ಹೇಳಿರಲಿಲ್ಲ ಆದರೆ ಹೆಡ್ಲಿ ಹೇಳಿದ್ದನ್ನೇ ಆತ ಪುನರುಚ್ಛರಿಸಿದ್ದ ಎಂದು ರಾಣಾ ಪರ ವಕೀಲರು ತಿಳಿಸಿದ್ದಾರೆ.
ಇವನ್ನೂ ಓದಿ