ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಅಣ್ವಸ್ತ್ರ ನೆಲೆ ಮೇಲೆ ದಾಳಿ ಮಾಡಲ್ಲ: ತಾಲಿಬಾನ್ (Won't attack | Pakistani nukes | Taliban | Ehsanullah Ehsan)
ಪಾಕಿಸ್ತಾನದ ಅಣ್ವಸ್ತ್ರ ಹೊಂದಿರುವ ಏಕೈಕ ಮುಸ್ಲಿಂ ರಾಷ್ಟ್ರವಾಗಿದ್ದು, ನಾವು ಆ ದೇಶದ ಅಣ್ವಸ್ತ್ರಗಳನ್ನು ನಾಶ ಮಾಡುವ ಯಾವುದೇ ಯೋಜನೆ ರೂಪಿಸಿಲ್ಲ ಎಂದು ತಾಲಿಬಾನ್‌ ಹೇಳಿದೆ. ಒಸಾಮಾ ಬಿನ್‌ ಲಾಡೆನ್‌ ಹತ್ಯೆಗೆ ಪ್ರತೀಕಾರವಾಗಿ ಕರಾಚಿ ನೌಕಾನೆಲೆಯ ಮೇಲೆ ತಾಲಿಬಾನ್ ಉಗ್ರರು ನಡೆಸಿದ್ದ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದರು. ಇದರಿಂದಾಗಿ ತಾಲಿಬಾನಿಗಳು ಪಾಕ್‌ ಅಣ್ವಸ್ತ್ರ ಶಸ್ತ್ರಾಗಾರದ ಮೇಲೂ ದಾಳಿ ನಡೆಸಬಹುದು ಎಂಬ ಆತಂಕವುಂಟಾಗಿತ್ತು.

ಅಣ್ವಸ್ತ್ರ ನೆಲೆ ಮೇಲೆ ದಾಳಿ ನಡೆಸುವ ಸಂಚಿನ ಆರೋಪವನ್ನು ನಿರಾಕರಿಸಿರುವ ತಾಲಿಬಾನ್‌ ವಕ್ತಾರ ಎಹಸಾನುಲ್ಲಾ ಎಹಸಾನ್‌, ಪಾಕಿಸ್ತಾನದ ರಕ್ಷಕ ಎಂದು ತನ್ನನ್ನು ಬಿಂಬಿಸಿಕೊಳ್ಳುತ್ತಿರುವ ಅಮೆರಿಕವು ತಾಲಿಬಾನ್‌ ವಿರುದ್ಧದ ಹೋರಾಟಕ್ಕೆ ಪಾಕ್‌ ಸರಕಾರದ ಮೇಲೆ ಒತ್ತಡ ಹೇರುವ ಕುತಂತ್ರ ಇದಾಗಿದೆ ಎಂದು ಆಪಾದಿಸಿದ್ದಾರೆ.

ವಾಲ್‌ಸ್ಟ್ರೀಟ್‌ ಜರ್ನಲ್‌ಗೆ ಅಜ್ಞಾತ ಸ್ಥಳವೊಂದರಿಂದ ದೂರವಾಣಿ ಮೂಲಕ ಸಂದರ್ಶನ ನೀಡಿದ ಎಹಸಾನ್‌, ಪಾಕಿಸ್ತಾನವು ಅಣ್ವಸ್ತ್ರ ಹೊಂದಿದ ಏಕೈಕ ಮುಸ್ಲಿಂ ರಾಷ್ಟ್ರವಾಗಿದ್ದು, ತಾಲಿಬಾನ್‌ ಅಣ್ವಸ್ತ್ರಗಳ ಮೇಲೆ ದಾಳಿ ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದೊಂದಿಗೆ ಕಾರ್ಯನಿರ್ವಹಿಸಲು ಪಾಕಿಸ್ತಾನ ಇಚ್ಛಿಸಿರುವುದನ್ನು ಅಣಕ ಮಾಡಿದ ಎಹಸಾನ್‌, 'ನಾವು ಇಸ್ಲಾಮಿಕ್‌ ಬಾಂಬ್‌ ಹೊಂದಿದ್ದರೂ ಅಮೆರಿಕದ ಒತ್ತಡಗಳಿಗೆ ಮಣಿಯುವುದು ನಾಚಿಕೆಗೇಡಿನ ಸಂಗತಿ' ಎಂದು ತಿಳಿಸಿದ್ದಾನೆ.
ಇವನ್ನೂ ಓದಿ