ಅತ್ಯಾಚಾರಕ್ಕೆ ಯತ್ನ: ಮರ್ಮಾಂಗ ಕತ್ತರಿಸಿ ಠಾಣೆಗೊಯ್ದ ಮಹಿಳೆ
ಢಾಕಾ, ಮಂಗಳವಾರ, 31 ಮೇ 2011( 11:29 IST )
ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗ ಕತ್ತರಿಸಿ ಅದನ್ನು ಸಾಕ್ಷಿಯಾಗಿ ಪೊಲೀಸ್ ಠಾಣೆಗೆ ನೀಡಿದ ಘಟನೆಯೊಂದು ಉತ್ತರ ಢಾಕಾದಿಂದ 120 ಮೈಲಿ ದೂರ ಇರುವ ಜಹಾಲಾಕಾಂತಿ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಮೂರು ಮಕ್ಕಳ ತಾಯಿಯಾಗಿರುವ ಮಹಿಳೆ ತನ್ನ ಗುಡಿಸಲಿನಲ್ಲಿ ಮಲಗಿದ್ದಾಗ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ. ಕೂಡಲೇ ಎಚ್ಚೆತ್ತ ಮಹಿಳೆ ಚಾಕುವಿನಿಂದ ಆತನ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿ ಪ್ಲಾಸ್ಟಿಕ್ ಕವರ್‌ನಲ್ಲಿ ತಂದು ಸಾಕ್ಷಾಧಾರಕ್ಕಾಗಿ ಪೊಲೀಸ್ ಠಾಣೆಗೆ ನೀಡಿದ್ದಾಳೆ ಎಂದು ಜಹಾಲಾಕಾಂತಿ ಪೊಲಸ್ ಠಾಣೆ ಅಧಿಕಾರಿ ಅಬ್ದುಲ್ ಖೇರ್ ತಿಳಿಸಿದ್ದಾರೆ.
ಐದು ಮಕ್ಕಳ ತಂದೆಯಾಗಿರುವ 40 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ಸಂಪರ್ಕಕ್ಕಾಗಿ ತನಗೆ ಕಳೆದ 6 ತಿಂಗಳಿನಿಂದ ಹಿಂಸೆ ನೀಡುತ್ತಿದ್ದ ಎಂದು ಆತನ ವಿರುದ್ಧ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ತುಂಡಾಗಿರುವ ಶಿಶ್ನವನ್ನು ಪೊಲೀಸ್ ಠಾಣೆಯಲ್ಲಿಡಲಾಗಿದ್ದು, ಆರೋಪಿತ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.