ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಿಂಬಾಬ್ವೆ ಅಧ್ಯಕ್ಷರ ಟಾಯ್ಲೆಟ್ ಬಳಸಿದ ಪೊಲೀಸ್ ಅರೆಸ್ಟ್! (Zimbabwe | Policeman | detained | toilet | trade fair | Bulawayo)
WD
ಸುಮಾರು 15 ದಿನಗಳ ಹಿಂದೆ ನಡೆದ ವಾಣಿಜ್ಯ ಮೇಳದ ಸಂದರ್ಭದಲ್ಲಿ ಪೊಲೀಸ್‌ನೊಬ್ಬ ಜಿಂಬಾಬ್ವೆ ಅಧ್ಯಕ್ಷ ರೋಬರ್ಟ್ ಮುಗಾಬೆ ಅವರ ಶೌಚಾಲಯ ಉಪಯೋಗಿಸಿದ್ದಕ್ಕೆ ಬಂಧಿಸಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಜಿಂಬಾಬ್ವೆಯ ಎರಡನೇ ಅತಿದೊಡ್ಡ ನಗರವಾದ ಬೂಲಾವಾಯೋದಲ್ಲಿ ಎರಡು ವಾರಗಳ ಹಿಂದೆ ನಡೆದ ವಾಣಿಜ್ಯ ಮೇಳದ ಸಂದರ್ಭದಲ್ಲಿ ಸಾರ್ಜೆಂಟ್ ಅಲೋಯಿಸ್ ಮಾಬುನೂ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮೂತ್ರಬಾಧೆಯಿಂದ ಪರದಾಡತೊಡಗಿದ್ದ. ಆ ಸಂದರ್ಭದಲ್ಲಿ ಸಾರ್ಜೆಂಟ್ ಮಾಬುನೂ ಕಣ್ಣಿಗೆ ಕಂಡಿದ್ದೆ ಅಧ್ಯಕ್ಷ ಮುಗಾಬೆ ಖಾಸಗಿ ಶೌಚಾಲಯ. ಆತ ಅದರೊಳಗೆ ನುಗ್ಗಲು ಯತ್ನಿಸಿದಾಗ ಗಾರ್ಡ್ಸ್‌ಗಳು ತಡೆದಿದ್ದರು. ಆದರೂ ಒದ್ದಾಡಿಕೊಂಡು ಒಳಹೋಗಿ ಶೌಚಾಲಯದ ಬಾಗಿಲು ಹಾಕಿಕೊಂಡು ಮೂತ್ರ ಮಾಡಿದ ಮೇಲೆ ನಿರಾಳನಾಗಿ ಹೊರಬಂದಿದ್ದ!

ನಂತರ ಮಾಬುನೂ ಕರ್ತವ್ಯಕ್ಕೆ ಹಾಜರಾಗಿದ್ದ. ಆದರೆ ಈ ವಿಷಯವನ್ನು ಗಾರ್ಡ್ಸ್‌ಗಳು ಸೀಕ್ರೆಟ್ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅವರು ಮರುದಿನ ಮಾಬುನೂವನ್ನು ಸೆರೆ ಹಿಡಿದಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

ಬೂಲಾವಾಯೋದ ಹೊರವಲಯದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿರುವ ಅಧಿಕಾರಿಗಳು, ಶುಕ್ರವಾರ ನಡೆಯಲಿರುವ ಪೊಲೀಸ್ ಶಿಸ್ತುಪಾಲನಾ ವಿಚಾರಣಾ ಸಮಿತಿ ಮುಂದೆ ಹಾಜರಾಗಲಿದ್ದಾನೆ ಎಂದು ಹೇಳಿದ್ದಾರೆ.

87ರ ಹರೆಯದ ಅಧ್ಯಕ್ಷ ಮುಗಾಬೆ ಎಲ್ಲಿಯೇ ಇರಲಿ, ಯಾವ ಸ್ಥಳಕ್ಕೆ ಭೇಟಿ ನೀಡುವುದಾಗಲಿ ಅಲ್ಲೆಲ್ಲಾ ಆತ ತನ್ನ ಸೀಕ್ರೆಟ್ ಪೊಲೀಸ್ ಮತ್ತು ಬಿಗಿ ಭದ್ರತೆಯ ಬೆಂಗಾವಲು ಪಡೆಯ ಜತೆಯೇ ತೆರಳುತ್ತಾರೆ ಎಂದು ವರದಿ ತಿಳಿಸಿದೆ.
ಇವನ್ನೂ ಓದಿ