ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಕ್ಕೆ ಕಲ್ಲು ಹೊಡೆದು ಹತ್ಯೆ (Muslim girl | stoned to death | beauty contest | Ukraine | Sharia law)
ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಕ್ಕೆ ಕಲ್ಲು ಹೊಡೆದು ಹತ್ಯೆ
ಕಿವ್, ಬುಧವಾರ, 1 ಜೂನ್ 2011( 11:51 IST )
ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವುದನ್ನೇ ಮಹಾಪರಾಧ ಎಂದು ಪರಿಗಣಿಸಿ ಶರಿಯಾ ಕಾನೂನಿನಂತೆ 19ರ ಹರೆಯದ ಮುಸ್ಲಿಮ್ ಯುವತಿಯನ್ನು ಕಲ್ಲು ಹೊಡೆದು ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆಯೊಂದು ಉಕ್ರೈನ್‌ನಲ್ಲಿ ನಡೆದಿದೆ.
ಕ್ರೈಮೆಯಾ ಪ್ರಾಂತ್ಯದ ಸಮೀಪ ಇರುವ ಆಕೆಯ ಮನೆ ಸಮೀಪವೇ ಕಾಟ್ಯಾ ಕೊರೇನ್ (19) ಮೃತದೇಹ ಪತ್ತೆಯಾಗಿತ್ತು. ಆಕೆಯ ಶವವನ್ನು ಕಾಡಿನಲ್ಲಿ ಹೂಳಲಾಗಿತ್ತು. ಸುಮಾರು ಒಂದು ವಾರಗಳ ಕಾಲ ಆಕೆ ಕಾಣದಿರುವುದನ್ನು ಗಮನಿಸಿ ಹುಡುಕಾಡಿದ ಸಂದರ್ಭದಲ್ಲಿ ಆಕೆಯ ಶವ ಪತ್ತೆಯಾಗಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.
ಕಾಟ್ಯಾ ಕೊರೇನ್ ಯಾವಾಗಲೂ ಫ್ಯಾಶನ್ ಉಡುಗೆಯನ್ನೇ ಧರಿಸುತ್ತಿದ್ದಳು ಎಂದು ಆಕೆಯ ಗೆಳತಿಯರು ತಿಳಿಸಿದ್ದು, ಆಕೆ ಏಳನೇ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದಾಗಿ ವಿವರಿಸಿದ್ದಾರೆ.
ಆದರೆ ಆಕೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವುದಕ್ಕೆ ಕುಪಿತಗೊಂಡ ಮೂರು ಮುಸ್ಲಿಮ್ ಯುವಕರು ಕಲ್ಲು ಹೊಡೆದು ಹತ್ಯೆಗೈದಿದ್ದು, ಇಸ್ಲಾಮ್ ಪ್ರಕಾರ ನಾವು ಆಕೆಯನ್ನು ಹತ್ಯೆಗೈದಿರುವುದು ಸರಿ ಎಂದು ಸಮರ್ಥಿಸಿಕೊಂಡಿದ್ದಾರೆಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂವರು ಮಂದಿಯಲ್ಲಿ 16ರ ಹರೆಯದ ಆರೋಪಿ ಬಿಹಾಲ್ ಗಾಜ್ವಿ ಎಂಬಾತನನ್ನು ಬಂಧಿಸಿರುವುದಾಗಿ ಹೇಳಿರುವ ಪೊಲೀಸ್ ಅಧಿಕಾರಿ, ಆಕೆ ಇಸ್ಲಾಮ್‌ನ ಶರಿಯಾ ಕಾನೂನನ್ನು ಉಲ್ಲಂಘಿಸಿರುವುದಾಗಿ ಆತ ವಿಚಾರಣೆ ವೇಳೆ ತಿಳಿಸಿರುವುದಾಗಿ ಹೇಳಿದ್ದಾರೆ.