ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11- ನಾನು ರಾಣಾನನ್ನು ಮೂರ್ಖನನ್ನಾಗಿಸಿದೆ: ಹೆಡ್ಲಿ (David Coleman Headley | Tahawwur Husssain Rana | 26/11 Mumbai attack | conspiracy)
26/11 ರಂದು ನಡೆದ ಮುಂಬೈ ದಾಳಿಯಲ್ಲಿ ತಹಾವುರ್‌ ಹುಸೇನ್‌ ರಾಣಾನನ್ನು ಸಂಚುಕೋರನನ್ನಾಗಿ ಸೇರಿಸಿಕೊಳ್ಳುವ ಮೂಲಕ ಆತನನ್ನು ಮೂರ್ಖನನ್ನಾಗಿಸಿದೆ ಎಂದು ಪಾಕ್‌ ಮತ್ತು ಅಮೆರಿಕನ್‌ ಮೂಲದ ಲಷ್ಕರ್‌ ಉಗ್ರ ಡೇವಿಡ್‌ ಕೋಲ್ಮನ್‌ ಹೆಡ್ಲಿ ಕೋರ್ಟ್ ವಿಚಾರಣೆ ವೇಳೆ ತಿಳಿಸಿದ್ದಾನೆ.

'ರಾಣಾನನ್ನು ನಾನು ದಾಳಿ ಪ್ರಕರಣದಲ್ಲಿ ಸಿಲುಕಿಸಿ ಮೂರ್ಖನನ್ನಾಗಿಸಿದೆ. ಆತನ ಯಾವುದೇ ತಪ್ಪಿಲ್ಲದಿದ್ದರೂ ಆತನ ಸಹಾಯ ಪಡೆಯುವ ಮೂಲಕ ಆತನನ್ನು ಮೂರ್ಖನನ್ನಾಗಿಸಿದೆ ಎಂದು ಹೆಡ್ಲಿ ರಾಣಾ ಪರ ವಕೀಲ ಪಾಟ್ರಿಕ್‌ ಬ್ಲೇಗಾನ್‌ಗೆ ಹೆಡ್ಲಿ ಪ್ರಕರಣದ ಹಿನ್ನೆಲೆ ಕುರಿತಂತೆ ವಿವರಿಸಿದ್ದಾನೆ.

ಹೆಡ್ಲಿ ತಾನು ಅಪರಾಧಿ ಎಂದು ಒಪ್ಪಿಕೊಂಡಿದ್ದಾನೆ ಆದರೆ ರಾಣಾ ತಾನು ಭಯೋತ್ಪಾದನೆಗೆ ಬೆಂಬಲ ನೀಡಿದ ಪ್ರಕರಣ ಕುರಿತು ತಾನು ತಪ್ಪಿತಸ್ಥ ಎಂಬ ವಾದಕ್ಕೆ ಅಂಟಿಕೊಂಟಿದ್ದಾನೆ.

ಒಂದು ವೇಳೆ ಆರೋಪ ಸಾಬೀತಾದಲ್ಲಿ ರಾಣಾ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಮುಂಬೈ ದಾಳಿ ಕುರಿತು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಜೂನ್‌ 15ರ ವರೆಗೂ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಪರಿಣಿತ ವಂಚಕನಾಗಿರುವ ಹೆಡ್ಲಿ ತಾನು ನಡೆಸುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಬಾಲ್ಯದ ಸ್ನೇಹಿತ ರಾಣಾನನ್ನು ಆತನಿಗೆ ಗೊತ್ತಿಲ್ಲದಂತೆ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಸರಕಾರಿ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ.
ಇವನ್ನೂ ಓದಿ