ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಲ್ಲಾ, ಕಾಶ್ಮಿರಿಯನ್ನು ಬಂಧಿಸಿ: ಪಾಕ್‌ಗೆ ಅಮೆರಿಕ ಎಚ್ಚರಿಕೆ (Mullah Omar | Ilyas Kashmiri | US | Pak)
PTI
ಉತ್ತರ ವಜೀರಿಸ್ತಾನ ಬುಡಕಟ್ಟು ಪ್ರದೇಶದಲ್ಲಿ ಅಡಗಿರುವ ಅಲ್‌-ಕೈದಾ ಮತ್ತು ತಾಲಿಬಾನ್ ಉಗ್ರರಾದ ಆಯ್ಮಾನ್ ಅಲ್-ಜವಾಹರಿ, ಮುಲ್ಲಾ ಉಮರ್ ಮತ್ತು ಇಲಿಯಾಸ್ ಕಾಶ್ಮಿರಿಯನ್ನು ಜುಲೈ ಗಡುವಿನೊಳಗೆ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅಮೆರಿಕ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಭದ್ರತಾ ಪಡೆಗಳು ಅಲ್-ಜವಾಹರಿ, ಒಮರ್, ಕಾಶ್ಮಿರಿ, ಸಿರಾಜುದ್ದೀನ್ ಹಕ್ಕಾನಿ ಮತ್ತು ಅತಿಯಾ ಅಬ್ದುರ್ ರೆಹ್ಮಾನ್ ಅವರನ್ನು ಪ್ರತ್ಯೇಕವಾಗಿ ಅಥವಾ ಅಮೆರಿಕ ಪಡೆಗಳೊಂದಿಗೆ ಸೇನಾ ಕಾರ್ಯಾಚರಣೆ ನಡೆಸಿ ಜುಲೈ ತಿಂಗಳೊಳಗಾಗಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸಂದೇಶ ರವಾನಿಸಿದೆ.

ಜುಲೈ ತಿಂಗಳ ನಂತರ, ಅಫ್ಘಾನಿಸ್ತಾನದಿಂದ ನ್ಯಾಟೋ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಅಮೆರಿಕ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಎಚ್ಚರಿಕೆಯ ಸಂದೇಶದಿಂದಾಗಿ ಪಾಕಿಸ್ತಾನದ ನಾಗರಿಕ ಹಾಗೂ ಸೇನಾ ವಲಯಗಳಲ್ಲಿ ಆತಂಕ ಮೂಡಿಸಿದೆ ಎಂದು ನ್ಯೂಸ್ ಡೈಲಿ ವರದಿ ಮಾಡಿದೆ.

ಉತ್ತರ ವಜೀರಿಸ್ತಾನ್‌ನಲ್ಲಿ ಅಡಗಿರುವ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವಂತೆ ಅಮೆರಿಕದ ಒತ್ತಡದ ಮಧ್ಯೆಯು ಪಾಕ್ ಸೇನಾಪಡೆಗಳು ಇಲ್ಲಿಯವರೆಗೆ ಕಾರ್ಯಚರಣೆ ನಡೆಸಲು ಹಿಂದೇಟು ಹಾಕಿದ್ದು, ನಾಮಕವಾಸ್ತೆ ಕೆಲ ಕಾರ್ಯಾಚರಣೆಗಳು ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಉತ್ತರ ವಜೀರಿಸ್ತಾನ ಮೂಲದ ಹಕ್ಕಾನಿ ಉಗ್ರರ ಗುಂಪಿನಿಂದ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಬೆದರಿಕೆಯಿಲ್ಲ. ಪಾಕ್ ಗುಪ್ತಚರ ಸಂಸ್ಥೆಗಳು ಹಾಗೂ ಅಫ್ಘಾನ್ ತಾಲಿಬಾನ್‌ಗಳೊಂದಿಗೆ ಮಧ್ಯಸ್ಥಿಕೆ ವಹಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಲ್ಲಾ ನಾಜೀರ್ ಮತ್ತು ಹಫೀಜ್ ಗುಲ್ ಬಹಾದರ್ ನೇತೃತ್ವದ ಉಗ್ರಗಾಮಿ ಸಂಘಟನೆಗಳು ಸರಕಾರದ ಪರವಾಗಿರುವುದರಿಂದ, ಪಾಕ್ ಸೇನಾಪಡೆಗಳು ಕಾರ್ಯಾಚರಣೆ ನಡೆಸಲು ಹಿಂಜರಿಯಲು ಮತ್ತೊಂದು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಇವನ್ನೂ ಓದಿ