ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಕ್ಕೆ 'ಕಾಶ್ಮೀರಿ' ಅಡಗುತಾಣದ ಮಾಹಿತಿ ಕೊಟ್ಟಿದ್ದು ಹೆಡ್ಲಿ? (Ilyas Kashmiri | David Headley | Mumbai terror | drone killing | al-Qaida)
ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ, ಒಕ್ಕಣ್ಣ ಉಗ್ರ ಇಲ್ಯಾಸ್ ಕಾಶ್ಮೀರಿ ಅಡಗುತಾಣದ ಬಗ್ಗೆ ಮುಂಬೈ ದಾಳಿಯ ಮತ್ತೊಬ್ಬ ಪ್ರಮುಖ ಸಂಚುಕೋರ ಡೇವಿಡ್ ಹೆಡ್ಲಿಯೇ ಅಮೆರಿಕದ ಅಧಿಕಾರಿಗಳಿಗೆ ಮಾಹಿತಿ ನೀಡಿರಬೇಕು ಎಂಬ ಶಂಕೆ ಬಲವಾಗುತ್ತಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಇಲ್ಯಾಸ್ ಕಾಶ್ಮೀರಿಯ ರಹಸ್ಯಸ್ಥಳದ ಕುರಿತು ಅಮೆರಿಕದ ವಶದಲ್ಲಿರುವ ಉಗ್ರ ಡೇವಿಡ್ ಹೆಡ್ಲಿಯೇ ಫೆಡರಲ್ ಇನ್ವೆಷ್ಟಿಗೇಷನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆಯೇ ಎಂಬುದು ಖಚಿತವಾಗಿಲ್ಲವಾದರೂ ಕೂಡ ಬಹುತೇಕವಾಗಿ ಹೆಡ್ಲಿಯೇ ಆ ಮಾಹಿತಿಯನ್ನು ಬಹಿರಂಗಗೊಳಿಸಿರಬಹುದು ಎಂದು ಶಂಕಿಸಲಾಗಿದೆ.

2009ರಲ್ಲಿ ಡೇವಿಡ್ ಹೆಡ್ಲಿ ಪಾಕಿಸ್ತಾನ್ ಮಿಲಿಟರಿ ಮಾಜಿ ಅಧಿಕಾರಿ ಅಬ್ದುರ್ ರೆಹಮಾನ್ ಹಾಸೀಮ್ ಅಲಿಯಾಸ್ ಪಾಶಾ ಜತೆ ಇಲ್ಯಾಸ್ ಕಾಶ್ಮೀರಿಯನ್ನು ವಜೀರಿಸ್ತಾನದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ. ಪ್ರವಾದಿ ಮೊಹಮ್ಮದ್ ಅವರ ಕಾರ್ಟೂನ್ ಅನ್ನು ವಿಕೃತವಾಗಿ ಪ್ರಕಟಿಸಿರುವುದಕ್ಕೆ ಪ್ರತೀಕಾರವಾಗಿ ಮೊರ್ಗೆನಾವಿಸೆನ್ ಜೈಲ್ಯಾಂಡ್ ಪೋಸ್ಟನ್ ನ್ಯೂಸ್ ಪೇಪರ್ ಕಚೇರಿ ಮೇಲೆ 2005ರಲ್ಲಿ ದಾಳಿ ನಡೆಸಿದ ಘಟನೆ ಕುರಿತು ಚರ್ಚಿಸಲು ಈ ಭೇಟಿ ನಡೆದಿತ್ತು. ನಂತರ ಅದೇ ವರ್ಷ ಮೇ ತಿಂಗಳಿನಲ್ಲಿ ಹೆಡ್ಲಿ ಮತ್ತು ಪಾಶಾ ಇಲ್ಯಾಸ್ ಕಾಶ್ಮೀರಿಯನ್ನು ಭೇಟಿಯಾಗಿದ್ದರು ಎಂದು ವರದಿ ವಿವರಿಸಿದೆ.

ಪಾಕಿಸ್ತಾನದ ದಕ್ಷಿಣ ವಜೀರಿಸ್ತಾನದಲ್ಲಿ ಮೇ 4ರಂದು ಅಲ್ ಖಾಯಿದಾ ನಿಕಟವರ್ತಿ, ಮುಂಬೈ ದಾಳಿಯ ಪ್ರಮುಖ ರೂವಾರಿಯಾಗಿದ್ದ ಹರ್ಕತುಲ್ ಜಿಹಾದ್ ಅಲ್ ಇಸ್ಲಾಮಿ ವರಿಷ್ಠ ಇಲ್ಯಾಸ್ ಕಾಶ್ಮೀರಿಯನ್ನು ಅಮೆರಿಕ ಪಡೆಯ ಡ್ರೋನ್ ದಾಳಿಯಲ್ಲಿ ಹತ್ಯೆಗೀಡಾಗಿದ್ದ.
ಇವನ್ನೂ ಓದಿ