ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ; ರಾಣಾ ತೀರ್ಪು ಮುಂದೂಡಿದ ಕೋರ್ಟ್ (26/11 | Hussain Rana | Chicago | verdict | US court | Denmark)
ಮುಂಬೈ ಭಯೋತ್ಪಾದನಾ ದಾಳಿಯ ಆರೋಪಿ ತಹಾವ್ವೂರ್ ಹುಸೈನ್ ರಾಣಾ ಕುರಿತ ಅಂತಿಮ ತೀರ್ಪು ನೀಡುವಿಕೆಯನ್ನು ಷಿಕಾಗೋ ಕೋರ್ಟ್ ಮುಂದೂಡಿದೆ.

12 ಸದಸ್ಯರನ್ನೊಳಗೊಂಡ ಜ್ಯೂರಿ ದಾಳಿ ಪ್ರಕರಣದ ಕುರಿತ ವಾದ-ಪ್ರತಿವಾದವನ್ನು ಆಲಿಸಿದ ನಂತರ ಆತನ ಕುರಿತ ಅಂತಿಮ ತೀರ್ಪಿನ ಕುರಿತು ಪರಿಶೀಲನೆ ನಡೆಸುತ್ತಿದೆ.

ರಾಣಾ ವಿರುದ್ಧ ಮೂರು ಆರೋಪಗಳನ್ನು ಹೊರಿಸಲಾಗಿದ್ದು, 26/11ರ ಆರೋಪಿಗಳಿಗೆ ನೆರವು, ಲಷ್ಕರ್ ಇ ತೊಯ್ಬಾಯಕ್ಕೆ ಶಸ್ತ್ರಾಸ್ತ್ರ ಪೂರೈಕೆ ಹಾಗೂ ಡೆನ್ಮಾರ್ಕ್ ಭಯೋತ್ಪಾದನಾ ದಾಳಿಯ ಸಂಚು ಸೇರಿದೆ.

ಆ ನಿಟ್ಟಿನಲ್ಲಿ ರಾಣಾನನ್ನು ದೋಷಿ ಎಂದು ಘೋಷಿಸಲು ಬೇಕಾದಷ್ಟು ಸಾಕ್ಷ್ಯಾಧಾರಗಳು ಇದ್ದು, ಒಂದು ವೇಳೆ ಆತ ಆರೋಪಿ ಎಂದು ಸಾಬೀತಾದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾನೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.
ಇವನ್ನೂ ಓದಿ