ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನಿಸ್ತಾನ: ನ್ಯಾಟೋ ದಾಳಿಗೆ ಹಕ್ಕಾನಿ ಕಮಾಂಡರ್ ಬಲಿ (NATO | Haqqani Commander, killed, Afghanistan)
ಅಫ್ಘಾನಿಸ್ತಾನ್ ಹೋಟೆಲೊಂದರ ಮೇಲೆ ದಾಳಿ ನಡೆಸಿದ್ದ ಅಲ್‌ಖೈದಾ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಹಕ್ಕಾನಿ ಸಂಘಟನೆಯ ಹಿರಿಯ ಕಮಾಂಡರ್ ಒಬ್ಬನನ್ನು ಹತ್ಯೆ ಮಾಡಿರುವುದಾಗಿ ಅಫ್ಘಾನಿಸ್ತಾನದಲ್ಲಿರುವ ನ್ಯಾಟೋ ಪಡೆ ಹೇಳಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವಿದೇಶಿ ಪ್ರವಾಸಿಗರೇ ಹೆಚ್ಚಾಗಿ ಆಗಮಿಸುವ ಹಿಲ್‌ ಟಾಪ್‌ ಇಂಟರ್‌ನ್ಯಾಷನಲ್‌ ಹೋಟೆಲ್‌ಗೆ ದಾಳಿ ಮಾಡಿದ್ದ ಅಲ್‌ಖೈದಾ ಉಗ್ರರು ಹೋಟೆಲ್‌ನಲ್ಲಿದ್ದ ಪ್ರವಾಸಿಗರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ನೆರವಿಗೆ ಬಂದ ನ್ಯಾಟೋ ಪಡೆ ನಡೆಸಿದ ವೈಮಾನಿಕ ದಾಳಿ ನಡೆಸಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು.

ನ್ಯಾಟೋ ಪಡೆಗಳಿಂದ ಅಫ್ಘಾನಿಸ್ತಾನದ ಪೂರ್ವ ಪಾಕ್ತಿಯಾ ಪ್ರಾಂತ್ಯದಲ್ಲಿ ಹತ್ಯೆಗೀಡಾಗಿರುವ ವ್ಯಕ್ತಿ ಹಕ್ಕಾನಿ ಉಗ್ರಗಾಮಿ ಸಂಘಟನೆಯ ಹಿರಿಯ ಕಮಾಂಡರ್ ಇಸ್ಮಾಯಿಲ್‌ ಜಾನ್‌ ಎಂದು ಅಂತಾರಾಷ್ಟ್ರೀಯ ಭದ್ರತಾ ಪಡೆಗಳು ಗುರುತಿಸಿವೆ.
ಇವನ್ನೂ ಓದಿ