ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಹುಪತ್ನಿತ್ವ ಬೇಡ; ಮಲೇಷ್ಯಾ ಯುವ ಮುಸ್ಲಿಮ್ ಸಮುದಾಯ (Young Muslims | Indonesia | Malaysia | oppose polygamy)
ಮುಸ್ಲಿಂ ಪ್ರಾಬಲ್ಯವಿರುವ ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲಿರುವ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಯುವ ಸಮುದಾಯವು ಸಾಂಪ್ರದಾಯಿಕ ಬಹುಪತ್ನಿತ್ವ ಪದ್ಧತಿಯನ್ನು ವಿರೋಧಿಸಿದೆ ಹಾಗೂ ವಿವಾಹ ಪೂರ್ವ ಲೈಂಗಿಕ ಸಂಪರ್ಕ ಹಾಗೂ ಅತರ್‌ ಧರ್ಮೀಯ ವಿವಾಹದ ಕುರಿತು ಬಹಿರಂಗವಾಗಿ ಪ್ರತಿಕ್ರಿಯಿಸಲು ನಿರಾಕರಿಸಿರುವುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜರ್ಮನಿ ಮೂಲದ ಎರಡು ಸಾಂಸ್ಕೃತಿಕ ಸಂಘಟನೆಗಳು ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಇಂಡೋನೇಷ್ಯಾದ 1,496 ಮಂದಿಯ ಪೈಕಿ ಶೇ.86.5 ಮಂದಿ ಹಾಗೂ ಮಲೇಷ್ಯಾದ 1,060 ಜನರ ಪೈಕಿ ಶೇ.72.7 ಮಂದಿ ಬಹುಪತ್ನಿತ್ವಕ್ಕೆ ವಿರೋಧ ವ್ಯಕ್ತಪಡಿಸಿದ ಅಂಶವು ಬಹಿರಂಗವಾಗಿದೆ.

ಈ ಸಮೀಕ್ಷೆಯಲ್ಲಿ ಪುರುಷರಿಗೆ ಹೋಲಿಸಿದರೆ ಬಹುತೇಕ ಮಂದಿ ಮಹಿಳೆಯರು ಐದು ಮಂದಿಯನ್ನು ಪತ್ನಿಯರನ್ನಾಗಿ ಸ್ವೀಕರಿಸಲು ಅವಕಾಶ ನೀಡುವ ಇಸ್ಲಾಂ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಮೀಕ್ಷೆಯಿಂದ ಮುಸ್ಲಿಂ ಪ್ರಾಬಲ್ಯವಿರುವ ಯುವ ಸಮುದಾಯವು ಬಹುಪತ್ನಿತ್ವವು ಇಸ್ಲಾಂ ಸಂಪ್ರದಾಯ ಎಂಬ ನಿಲುವಿನಿಂದ ಹೊರ ಬಂದಿದೆ ಎಂದು ತಿಳಿದುಬರುತ್ತದೆ ಎಂದು ಸಮೀಕ್ಷಾ ಕಾರ್ಯ ನಡೆಸಿದ ಗೋಯೆಥೆ ಇನ್ಸ್‌ಟಿಟ್ಯೂಟ್‌ ಹಾಗೂ ಫ್ರೆಡ್ರಿಕ್ ನವೂಮನ್‌ ಫೌಂಡೇಷನ್‌ ಫಾರ್ ಫ್ರೀಡಂ ಸಂಸ್ಥೆಗಳು ತಿಳಿಸಿವೆ.

ಈ ಸಂಸ್ಥೆಗಳು ಕಳೆದ ವರ್ಷ ನವೆಂಬರ್‌ನಲ್ಲಿ 15 ರಿಂದ 25 ವರ್ಷದೊಳಗಿನ ಯುವಕ, ಯುವತಿಯರ ಮುಖಾಮುಖಿ ಸಂದರ್ಶನ ನಡೆಸಿದ್ದವು.

ಇಂಡೋನೇಷ್ಯಾ ಹಾಗೂ ಮಲೇಷ್ಯಾ ರಾಷ್ಟ್ರಗಳು ಆಗ್ನೇಯ ಏಷ್ಯಾದಲ್ಲೇ ಅತಿ ಹೆಚ್ಚು ಮುಸ್ಲಿಂ ಪ್ರಾಬಲ್ಯವಿರುವ ರಾಷ್ಟ್ರಗಳಾಗಿದ್ದು, ಈ ರಾಷ್ಟ್ರಗಳಲ್ಲಿ ಬಹು ಪತ್ನಿತ್ವದ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಒಂದಕ್ಕಿಂತ ಹೆಚ್ಚಿನ ಮದುವೆಯಾದವರು ತಮ್ಮ ಮೊದಲಿನ ಪತ್ನಿ ಹಾಗೂ ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದು, ಈ ಕುಟುಂಬಗಳು ಆರ್ಥಿಕವಾಗಿಯೂ ದುರ್ಬಲವಾಗುತ್ತಿವೆ ಎಂದು ಮಹಿಳಾ ಸಮುದಾಯಗಳು ಆರೋಪಿಸಿವೆ.

ಮಲೇಷ್ಯಾದಲ್ಲಿ ಬಹುಪತ್ನಿತ್ವ ಸಂಘಗಳಿಂದ ಶೇ. 5 ರಷ್ಟು ಹೊಸ ಮದುವೆಗಳು ನಡೆಯುತ್ತಿವೆ. ಆದರೆ ಇಂಡೋನೇಷ್ಯಾದಲ್ಲಿ ಬಹು ಪತ್ನಿತ್ವ ವಿವಾಹ ಪದ್ಧತಿ ವ್ಯಾಪಕವಾಗಿದ್ದು, ಮಸೀದಿಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಗೌಪ್ಯವಾಗಿ ಈ ರೀತಿಯ ವಿವಾಹಗಳನ್ನು ನಡೆಸುತ್ತಿದ್ದು,ಈ ವಿವಾಹಗಳ ಕುರಿತು ಸರಕಾರದ ಸಂಬಂಧಪಟ್ಟ ಇಲಾಖೆಗಳಲ್ಲೂ ದಾಖಲಾಗುವುದಿಲ್ಲ ಎಂಬ ಅಂಶ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಇವನ್ನೂ ಓದಿ