'ದಿ ಡಾನ್ ' ಪತ್ರಿಕೆಯು ಉಗ್ರರು ಮತ್ತೊಮ್ಮೆ ಮುಂಬೈನಲ್ಲಿ ದಾಳಿ ನಡೆಸಿದ್ದಾರೆ ಎಂದು ಮುಖಪುಟ ಲೇಖನ ಪ್ರಕಟಿಸಿದೆ. ಮುಂಬೈನಲ್ಲಿ 2002ರಿಂದ ಈ ವರೆಗೆ 8 ಬಾರಿ ಬಾಂಬ್ ಸ್ಪೋಟ ಸಂಭವಿಸಿದ್ದು, ಈ ದುಷ್ಕೃತ್ಯಕ್ಕೆ ಇಂಡಿಯನ್ ಮುಜಾಹಿದೀನ್ ಹಾಗೂ ನಿಷೇಧಿತ ಸಂಘಟನೆಯಾ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಕಾರಣ ಎಂದು ಭಾರತ ಸರಕಾರ ಆಪಾದಿಸಿದೆ ಎಂದು ಪತ್ರಿಕಾ ವರದಿಯಲ್ಲಿ ತಿಳಿಸಲಾಗಿದೆ.
ಮುಂಬೈನ ಜನ ನಿಬಿಡ ಪ್ರದೇಶಗಳಾದ ದಾದರ್, ಝವೇರಿ ಬಜಾರ್ ಹಾಗೂ ಒಪೇರಾ ಹೌಸ್ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 131ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಜಿಯೋ ನ್ಯೂಸ್ ತನ್ನ ಹೆಡ್‌ಲೈನ್ಸ್‌ನಲ್ಲಿ ಉಗ್ರರು ಮುಂಬೈನಲ್ಲಿ ನಡೆಸಿದ ತ್ರಿವಳಿ ಬಾಂಬ್ ಸ್ಪೋಟಿಸಿದ್ದು, ಸುಮಾರು 21ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಮುಂಬೈನ ಪ್ರಮುಖ ಚಿನ್ನಾಭರಣ ಮಾರಾಟ ಕೇಂದ್ರವಾದ ಓಪೆರಾ ಹೌಸನ್ನೇ ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಡೈಲಿ ನ್ಯೂಸ್ ಪತ್ರಿಕೆಯು ಮುಂಬೈ ಮೇಲೆ ಮತ್ತೊಮ್ಮೆ ಉಗ್ರರ ದಾಳಿ ಎಂಬ ತಲೆ ಬರಹದಲ್ಲಿ ವರದಿ ಪ್ರಕಟಿಸಿದ್ದು, ಉಗ್ರರ ದುಷ್ಕೃತ್ಯವನ್ನು ಖಂಡಿಸುವ ವರದಿಯನ್ನೂ ಮುಖ ಪುಟದಲ್ಲಿ ಪ್ರಕಟಿಸಿದೆ.
ಪಾಕಿಸ್ತಾನದ ವೆಬ್ ಸೈಟ್‌ಗಳೂ ಸಹ ಮುಂಬೈ ಸ್ಪೋಟದ ಕುರಿತ ಛಾಯಾ ಚಿತ್ರ ಹಾಗೂ ವರದಿಗಳನ್ನು ಪ್ರಕಟಿಸಿವೆ.