ಲಿಬಿಯಾ ರಾಜಧಾನಿ ಟ್ರೈಪೋಲಿಯನ್ನು ಬಂಡುಕೋರರೇನಾದರೂ ವಶಪಡಿಸಿಕೊಂಡರೆ ರಾಜಧಾನಿಯನ್ನು ಸ್ಫೋಟಿಸಲು ಅಧ್ಯಕ್ಷ ಮುಅಮ್ಮರ್ ಗಡಾಫಿ ಯೋಜನೆ ರೂಪಿಸಿದ್ದ ಎಂದು ಲಿಬಿಯಾದಲ್ಲಿರುವ ರಷ್ಯಾದ ವಿಶೇಷ ರಾಯಭಾರಿಯೊಬ್ಬ ರಷ್ಯಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾನೆ.
'ಬಂಡುಕೋರರೇನಾದರೂ ಲಿಬಿಯಾವನ್ನು ವಶಪಡಿಸಿಕೊಂಡರೆ ನಾವು ಕ್ಷಿಪಣಿಗಳನ್ನು ಸ್ಫೋಟಿಸಲು ನಿರ್ಧರಿಸಿದ್ದಾಗಿ ಲಿಬಿಯಾ ಪ್ರಧಾನಿ ಬಗ್ದಾದಿ ಅಲ್ ಮಹಮೂದ್ ಅವರು ತನಗೆ ತಿಳಿಸಿದ್ದರು' ಎಂದು ವಿಶೇಷ ರಾಯಭಾರಿ ಮಿಕಾಯಲ್ ಮಾರ್ಗೆಲೋವ್ ಎಲ್ಜ್‌ವಿಸ್ಟಾ ದೈನಿಕಕ್ಕೆ ತಿಳಿಸಿದ್ದಾರೆ. ಮಾರ್ಗೆಲೋವ್ ಲಿಬಿಯಾ ಪ್ರಧಾನಿ ಬಾಗ್ದಾದಿ ಅಲ್ ಮಹಮೂದ್ ಅವರನ್ನು ಕಳೆದ ತಿಂಗಳು ಭೇಟಿ ಮಾಡಿದ್ದರು.
ಗಡಾಫಿಗೆ ಈಗಲೂ ಕ್ಷಿಪಣಿಗಳು ಹಾಗೂ ಶಸ್ತ್ರಾಸ್ತ್ರಗಳು ಸರಬರಾಜಾಗುತ್ತಿದ್ದು, 'ಗಡಾಫಿ ಈ ರೀತಿಯ ಆತ್ಮಹತ್ಯೆಯ ಯೋಜನೆ ಹೊಂದಿದ್ದರೇ ಎಂದು ನಾನು ಕಲ್ಪಿಸಿಕೊಂಡಿದ್ದೆ' ಎಂದು ಆತ ಹೇಳಿದ್ದಾನೆ.
ಆದರೆ ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಗಡಾಫಿಯ ಬಳಿ ಯಾವುದೇ ಶಸ್ತ್ರಾಸ್ತ್ರವಿಲ್ಲ, ಆತ ದ್ವೇಷ ಭಾವನೆಯಿಂದ ಹೊರ ಬಂದಿದ್ದಾನೆ ಎಂದು ತಿಳಿಸಿದ್ದಾರೆ ಎಂದು ಮಾರ್ಗೆಲೋವ್ ತಿಳಿಸಿದ್ದಾನೆ.