ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನಿಸ್ತಾನ: ಅಧ್ಯಕ್ಷ ಕರ್ಜಾಯಿ ಸಲಹೆಗಾರನ ಹತ್ಯೆ (Afghan president | Adviser | Murdered | Kabul)
ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್‌ ಕರ್ಜಾಯಿ ಅವರ ಸಲಹೆಗಾರನನ್ನು ದುಷ್ಕರ್ಮಿಗಳು ಹತ್ಯೆಮಾಡಿದ್ದಾರೆ ಎಂದು ಪೊಲೀಸ್‌ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾರ್ಲಿಮೆಂಟ್‌ ಕಟ್ಟಡದ ಸಮೀಪದಲ್ಲೇ ಇರುವ ಅಧ್ಯಕ್ಷರ ಸಲಹೆಗಾರರ ನಿವಾಸವು ಉಗ್ರರ ವಶದಲ್ಲಿದ್ದು, ಡಜನ್‌ಗಟ್ಟಲೇ ಪೊಲೀಸರು ಕಟ್ಟಡದ ಹೊರಗೆ ಜಮಾಯಿಸಿದ್ದು ಗುಂಡಿನ ದಾಳಿ ಮುಂದುವರಿಸಿದ್ದಾರೆ. ಕಟ್ಟಡ ಒಳಗಿರುವ ದಾಳಿಕೋರರು ಗ್ರೆನೇಡ್‌ ದಾಳಿ ನಡೆಸುತ್ತಿದ್ದಾರೆ.

ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ದಕ್ಷಿಣ ಉರ್ಜ್‌‌ಗಾನ್‌ ಪ್ರಾಂತ್ಯದ ಮಾಜಿ ರಾಜ್ಯಪಾಲ ಹಾಗೂ ಅಫ್ಘಾನ್‌ ಅಧ್ಯಕ್ಷರ ಸಲಹೆಗಾರರಾಗಿದ್ದ ಜಾನ್‌ ಮಹಮದ್‌ ಖಾನ್‌ ಹಾಗೂ ಉರ್ಜ್‌‌ಗಾನ್‌ ಕ್ಷೇತ್ರದ ಸಂಸದ ಮಹಮದ್‌ ಹಶೀಮ್‌ ವತನ್‌ವಾಲ್‌ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ಅಫ್ಘಾನ್‌ ಅಧ್ಯಕ್ಷ ಹಮೀದ್‌ ಕರ್ಜಾಯಿ ಅವರ ಸಹೋದರ ಅಹಮದ್‌ ವಲಿ ಕರ್ಜಾಯಿ ಹತ್ಯೆ ನಡೆದ ಒಂದು ವಾರದಲ್ಲೇ ಅಧ್ಯಕ್ಷರ ಸಲಹೆಹಾರರ ಹತ್ಯೆ ಮಾಡಿರುವುದು ಆತಂಕ ಮೂಡಿಸಿದೆ.

ಅಫ್ಘಾನಿಸ್ತಾನದ ರಕ್ಷಣಾ ಜವಾಬ್ದಾರಿಯನ್ನು ವಿದೇಶಿ ಪಡೆಗಳಿಂದ ಸ್ಥಳೀಯ ಸರಕಾರಕ್ಕೆ ವಹಿಸುವ ಪ್ರಕ್ರಿಯೆ ಭಾನುವಾರ ನಡೆಯಿತು. ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಕಮಾಂಡರ್ ಜನರಲ್‌ ಡೇವಿಡ್‌ ಪೆಟ್ರಾಯ್ಸ್‌ ಅವರ ಅಧಿಕಾರವು ಭಾನುವಾರ ಅಂತ್ಯಗೊಂಡಿತು.

ಅಫ್ಘಾನ್‌ ಅಧ್ಯಕ್ಷರ ಸಲಹೆಗಾರರ ಮನೆಯ ಮೇಲೆ ಭಾನುವಾರ ನಡೆದ ದಾಳಿಯಲ್ಲಿ ಅಂಗರಕ್ಷಕನೂ ಮೃತಪಟ್ಟಿದ್ದಾನೆ ಎಂದು ತಿಳಿಸಿರುವ ಪೊಲೀಸ್‌ ವಕ್ತಾರ ಹಷ್ಮತ್‌ ಸ್ಟನಿಕ್ಜಾಯ್‌, ಖಾನ್‌ ಅವರ ನಿವಾಸವು ಇನ್ನೂ ದಾಳಿಕೋರರ ವಶದಲ್ಲೇ ಇದ್ದು, ಅವರ ಕುಟುಂಬದವರು ಪಾರಾಗಿದ್ದಾರೆಯೇ ಅಥವಾ ಅಲ್ಲಿಯೇ ಇದ್ದಾರೆಯೇ ಎಂಬುದು ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.
ಇವನ್ನೂ ಓದಿ